ಮುಖದ ಕಾಂತಿಗೆ ಅರಶಿನ ಪರಿಣಾಮಕಾರಿ..!

ಮುಖದ ಕಾಂತಿಗೆ ಅರಶಿನ ಪರಿಣಾಮಕಾರಿ..!

LK   ¦    Dec 25, 2018 01:04:02 PM (IST)
ಮುಖದ ಕಾಂತಿಗೆ ಅರಶಿನ ಪರಿಣಾಮಕಾರಿ..!

ಇತ್ತೀಚೆಗೆ ಮುಖದ ಕಾಂತಿ ಹೆಚ್ಚಿಸಲೆಂದೇ ಮಾರುಕಟ್ಟೆಗೆ ಹಲವು ಬಗೆಯ ಸೌಂದರ್ಯವರ್ಧಕಗಳು ಬಂದಿವೆ. ಈ ಸೌಂದರ್ಯ ವರ್ಧಕಗಳು ಕೂಡ ತಮ್ಮ ಮನೆಯ ಸುತ್ತ ಸಿಗುವ ಗಿಡಮೂಲಿಕೆಗಳಿಂದಲೇ ತಯಾರಾದವುಗಳು ಎಂಬುದು ಅಷ್ಟೇ ಸತ್ಯ. 

ಹಿಂದಿನ ಕಾಲದಲ್ಲಿ ಹೆಚ್ಚಿನವರು ತಮ್ಮ ಮನೆಯ ಸುತ್ತಲೇ ಸಿಗುವ ಮೂಲಿಕೆಗಳನ್ನು ಬಳಸಿಕೊಂಡು ತಮ್ಮ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಇಂತಹ ಗಿಡಮೂಲಿಕೆಗಳಲ್ಲಿ ಅರಶಿನವೂ ಒಂದಾಗಿದೆ. ಈ ಗಿಡವನ್ನು ಹಿತ್ತಲಲ್ಲಿ ನೆಟ್ಟು ಬೆಳೆಸಿಕೊಳ್ಳುವುದರಿಂದ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. 

ಮನೆ ಬಳಿಯೇ ಇದ್ದರೆ ಅಗೆದು ಗಿಡದ ಬುಡದಿಂದ ಅರಿಶಿಣ ತೆಗೆದು ಉಪಯೋಗಿಸಿದರೆ ಇನ್ನಷ್ಟು  ಪರಿಣಾಮಕಾರಿಯಾಗಲಿದೆ. ಮೊದಲಿನಿಂದಲೂ ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಅರಶಿಣ ತನ್ನದೇ ಪಾತ್ರ ವಹಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದಾಗಿದೆ. 

ಮದುವೆ ಶುಭಸಮಾರಂಭದಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ವಧು-ವರರನ್ನು ಇಂದಿಗೂ ಅರಿಶಿಣ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಕಾರಣ ವಿವಾಹದ ಸಂದರ್ಭ ಕಾಂತಿಯುತವಾಗಿ ಕಾಣಲಿ ಎಂಬ ಉದ್ದೇಶ ಇದಾಗಿದೆ. 

ಕಸ್ತೂರಿ ಅರಿಶಿಣವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಕಸ್ತೂರಿ ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ  ಮುಖ ಕಾಂತಿಯುವಾಗುತ್ತದೆ. 

ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ  ಅರೆದು ಉಪಯೋಗಿಸಬಹುದು. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಮೇಲೆ  ಗುರುತುಗಳು, ಕಲೆಗಳು ಮೂಡುವುದು ಸಾಮಾನ್ಯ. ಆಗ ಹಾಲಿನೊಂದಿಗೆ ಕಸ್ತೂರಿ ಅರಿಶಿನ ಅರೆದು ಹೊಟ್ಟೆಗೆ ಹಚ್ಚಿ ಸ್ನಾನದ ಮೊದಲು ತೆಂಗಿನ  ಎಣ್ಣೆಯನ್ನು ಹಚ್ಚುತ್ತಿದ್ದರೆ ಈ ಗುರುತುಗಳು ಮಾಯವಾಗುತ್ತವೆ. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ. 

ಗುಲಾಬಿ ದಳಗಳು ಮತ್ತು ಕಸ್ತೂರಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಅತ್ಯುತ್ತಮವಾದ  ಸ್ನಾನದ ಪುಡಿಯನ್ನಾಗಿ ಬಳಸಬಹುದು. ಸಾಬೂನಿನ ಬದಲಾಗಿ  ಇದನ್ನೇ ಬಳಸಿದರೆ ಅನೇಕ ಬಗೆಯ ಚರ್ಮರೋಗಗಳು ಗುಣವಾಗುತ್ತವೆ. ಜತೆಗೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶ ಮಾಡದೆ ರಕ್ಷಿಸಿ ಚರ್ಮವನ್ನು ಸುಸ್ಥಿತಿಯಲ್ಲಡುತ್ತದೆ. 

ಸೊಳ್ಳೆ ಮುಂತಾದ ಕೀಟಗಳು  ಕಚ್ಚಿದಾಗ ಉಂಟಾಗುವ ದದ್ದು  ಬಾವುಗಳು ಕಸ್ತೂರಿ ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಬಂಗು, ಚಿಬ್ಬು, ಇತ್ಯಾದಿ ಕಲೆಗಳ ನಿವಾರಣೆಗೆ ಹಾಲಿನ ಕೆನೆ, ಅಥವಾ ನಿಂಬೆ ರಸದಲ್ಲಿ ಕಸ್ತೂರಿ  ಅರಿಶಿನವನ್ನು ತೇಯ್ದು ಲೇಪಿಸಿ ಎರಡು ಗಂಟೆಗಳ  ಕಾಲ ಬಿಟ್ಟು ಬಿಸಿ ನೀರಿನಿಂದ ಕಡಲೆ ಹಿಟ್ಟು ಬಳಸಿ ತೊಳೆದರೆ ಮಾಯವಾಗುತ್ತದೆ. 

ಅರಿಶಿನದ ಉಪಯೋಗದ ಬಗ್ಗೆ ಗೊತ್ತಿಲ್ಲದವರು ಇನ್ನು ಮುಂದೆಯಾದರೂ ಇದರ ಮಹತ್ವ ಅರಿತು ಉಪಯೋಗಿಸುವುದನ್ನು ರೂಢಿಸಿಕೊಂಡರೆ ಮುಖದ ಕಾಂತಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೆ ಮುಖದಲ್ಲಿ ಕೂದಲು ಬೆಳೆಯುವುದು ಕಡಿಮೆಯಾಗುತ್ತದೆ.