ಅಲೋವೆರಾ ಅಂದಕ್ಕೂ ಸೈ, ಆರೋಗ್ಯಕ್ಕೂ ಜೈ

ಅಲೋವೆರಾ ಅಂದಕ್ಕೂ ಸೈ, ಆರೋಗ್ಯಕ್ಕೂ ಜೈ

YK   ¦    Oct 27, 2018 12:27:18 PM (IST)
ಅಲೋವೆರಾ ಅಂದಕ್ಕೂ ಸೈ, ಆರೋಗ್ಯಕ್ಕೂ ಜೈ

ಅಲೋವೆರಾ ಅಥವಾ ಲೋಳೆಸರ ಎಂಬುದು ಆರೋಗ್ಯ ಹಾಗೂ ಅಂದದ ವಿಚಾರದಲ್ಲಿ ಯಾವತ್ತೂ ಮುಂದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಇದನ್ನೂ ಹೆಚ್ಚಾಗಿ ಆಯುರ್ವೇದಿಕ್ ಜೌಷಧಿಗಳಲ್ಲಿ ಬಳಸುತ್ತಾರೆ.

ಸುಂದರವಾಗಿ ಕಾಣಬೇಕಾದರೆ ದಿನನಿತ್ಯಲೂ ಅಲೋವೆರವನ್ನು ಬಳಸುವುದರಿಂದ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲೋವೆರಾ ಆರೋಗ್ಯ ಹಾಗೂ ಸೌಂದರ್ಯ ಬಗೆಗಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ.

ದಿನನಿತ್ಯ ಮುಖಕ್ಕೆ ಅಲೋವೆರಾ: ಬೆಳಿಗ್ಗೆ ರೋಸ್ ವಾಟರ್ ಜತೆಗೆ ಅಲೋವೆರವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಈ ರೀತಿ ದಿನನಿತ್ಯಲೂ ಮಾಡುವುದರಿಂದ ಮುಖದಲ್ಲಿ ಮೊಡವೆ, ಕಪ್ಪು ಕಲೆಗಳು ದೂರವಾಗುತ್ತದೆ.

ಮುಖಕ್ಕೆ ಹಚ್ಚಿದ ಬಳಿಕ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ಬಳಿಕ ನೀರಿನಲ್ಲಿ ಮುಖ ತೊಳೆದು ಶುಭ್ರ ಬಟ್ಟೆಯಲ್ಲಿ ಮುಖವನ್ನು ಒರೆಸಿ. ಈ ರೀತಿ ಒಂದು ತಿಂಗಳು ಮಾಡುವುದರಿಂದ ನಿಮ್ಮ ಮುಖದಲ್ಲಿ ತುಂಬಾ ಬದಲಾವಣೆ ಕಾಣಬಹುದು. ಅಲೋವೆರಾವನ್ನು ಮನೆಯಲ್ಲಿಯೂ ಬೆಳೆಸಬಹುದು ಅಥವಾ ಅಂಗಡಿಗಳಲ್ಲೂ ಇದು ಸಿಗುತ್ತದೆ.