ಕಿಡ್ನಿ ಕಲ್ಲು ಬರದಂತೆ ತಡೆಯಲು ಈ ಕ್ರಮ ಪಾಲಿಸಿ

ಕಿಡ್ನಿ ಕಲ್ಲು ಬರದಂತೆ ತಡೆಯಲು ಈ ಕ್ರಮ ಪಾಲಿಸಿ

Oct 06, 2017 02:54:39 PM (IST)
ಕಿಡ್ನಿ ಕಲ್ಲು ಬರದಂತೆ ತಡೆಯಲು ಈ ಕ್ರಮ ಪಾಲಿಸಿ

ಮಾನವ ದೇಹದಲ್ಲಿರುವ ವಿಷ ಹಾಗೂ ಕಲ್ಮಷಗಳನ್ನು ಹೊರಹಾಕುವಂತಹ ಕಿಡ್ನಿಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ದೊಡ್ಡ ಮಟ್ಟದ ಅನಾರೋಗ್ಯ ಕಾಡುವುದು ನಿಶ್ಚಿತ. ದೇವರು ಮಾನವನಿಗೆ ಎರಡು ಕಿಡ್ನಿ ಕೊಟ್ಟಿರುವ ಕಾರಣದಿಂದ ಒಂದು ಕಿಡ್ನಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೂ ಮತ್ತೊಂದು ಕಿಡ್ನಿ ಕೆಲಸ ಮಾಡುತ್ತದೆ. ಆದರೆ ಎರಡೂ ವೈಫಲ್ಯವಾದರೆ ಆಗ ರಕ್ತವನ್ನು ಶುದ್ಧೀಕರಿಸಲು ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಆದರೆ ಈ ಲೇಖನದಲ್ಲಿ ಹೇಳುತ್ತಿರುವುದು ಕಿಡ್ನಿ ವೈಫಲ್ಯದ ಬಗ್ಗೆ ಅಲ್ಲ, ಕಿಡ್ನಿಯಲ್ಲಿ ಕಾಣಿಸಿಕೊಳ್ಳುವ ಕಲ್ಲು ಕೂಡ ಭಾರೀ ಸಮಸ್ಯೆ ಉಂಟು ಮಾಡುವುದು. ಕಿಡ್ನಿ ಕಲ್ಲು ದೊಡ್ಡದಾದರೆ ಅದನ್ನು ಶಸ್ತ್ರಚಿಕಿತ್ಸೆ ಮೂಲಕವೇ ತೆಗೆಯಬೇಕು. ಕಿಡ್ನಿ ಕಲ್ಲನ್ನು ತಡೆಯಲು ಯಾವ ರೀತಿಯ ಕ್ರಮ ಪಾಲಿಸಬೇಕು ಎಂದು ಮುಂದೆ ಓದುತ್ತಾ ತಿಳಿಯಿರಿ.

ನೀರು ಸೇವನೆ
ದಿನದಲ್ಲಿ 8-10 ಲೋಟ ನೀರು ಕುಡಿದರೆ ಅದರಿಂದ ಮೂತ್ರವು ಸರಾಗವಾಗಿ ಹೋಗುವುದು. ಇದರಿಂದ ಮೂತ್ರದಲ್ಲಿ ಖನಿಜಾಂಶಗಳು ಶೇಖರಣೆಯಾಗಿ ಕಲ್ಲು ನಿರ್ಮಾಣವಾಗುವುದು ತಪ್ಪುವುದು.

ಉಪ್ಪು ಕಡಿಮೆ ಸೇವಿಸಿ
ಆಹಾರ ಕ್ರಮದಲ್ಲಿ ಉಪ್ಪು(ಸೋಡಿಯಂ) ಸೇವನೆ ಕಡಿಮೆ ಮಾಡಿದರೆ ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ಟವು ಕಡಿಮೆಯಾಗುವುದು. ಅಧಿಕ ಸೋಡಿಯಂ ಇರುವಂತಹ ಸಂಸ್ಕರಿತ ಮಾಂಸ, ಬಾಟಲಿಯಲ್ಲಿ ಸಿಗುವ ಸೂಪ್, ನೂಡಲ್ಸ್ ಮತ್ತು ಉಪ್ಪಿನ ತಿಂಡಿಗಳನ್ನು ಸೇವಿಸಬೇಡಿ.

ಕ್ಯಾಲ್ಸಿಯಂಯುಕ್ತ ಆಹಾರ ಸೇವಿಸಿ
ದೈನಂದಿನ ಆಹಾರದಲ್ಲಿ ಕ್ಯಾಲ್ಸಿಯಂ ಇರುವಂತಹ ಎರಡು ಬಗೆಯ ಆಹಾರ ಸೇವಿಸಿ. ಇದರಿಂದ ಕಿಡ್ನಿಯಲ್ಲಿ ಕಲ್ಲು ನಿರ್ಮಾಣವಾಗುವುದು ಕಡಿಮೆಯಾಗುವುದು. ಒಂದು ಕಪ್ ಕಡಿಮೆ ಕೊಬ್ಬು ಇರುವ ಹಾಲಿನಲ್ಲಿ 300 ಮಿ.ಗ್ರಾಂ. ಕ್ಯಾಲ್ಸಿಯಂ ಇದೆ.

ಸಕ್ಕರೆ ತ್ಯಜಿಸಿ
ಸಕ್ಕರೆ ಕೂಡ ಕಿಡ್ನಿಯಲ್ಲಿ ಕ್ಯಾಲ್ಸಿಯಂ ಮತ್ತು ಕ್ಯಾಲ್ಸಿಯಂ ಆಕ್ಸಲೇಟ್ ನಿಂದ ನಿರ್ಮಾಣವಾಗುವ ಕಲ್ಲಿಗೆ ಕಾರಣವಾಗಿದೆ. ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಇರುವಂತವರು ಸಂಸ್ಕರಿತ ಸಕ್ಕರೆ ಆಹಾರ ಸೇವಿಸಬಾರದು.

ಚಾಕಲೇಟ್ ಸೇವನೆ ಕಡಿಮೆಗೊಳಿಸಿ
ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳಿಗೆ ಆಕ್ಸಲೇಟ್ ಹೆಚ್ಚಿರುವ ಕೆಲವೊಂದು ಡೈರಿ ಉತ್ಪನ್ನಗಳು ಕಾರಣವಾಗಿದೆ. ಚಾ ಮತ್ತು ಚಾಕಲೇಟ್ ಸೇವನೆ ಮಾಡಬಾರದು.