ಸೌಂದರ್ಯ ವೃದ್ಧಿಸಲು ಈ ಆಯುರ್ವೇದಿಕ್ ವಿಧಾನ ಬಳಸಿ ನೋಡಿ

ಸೌಂದರ್ಯ ವೃದ್ಧಿಸಲು ಈ ಆಯುರ್ವೇದಿಕ್ ವಿಧಾನ ಬಳಸಿ ನೋಡಿ

HSA   ¦    Nov 09, 2019 04:25:35 PM (IST)
ಸೌಂದರ್ಯ ವೃದ್ಧಿಸಲು ಈ ಆಯುರ್ವೇದಿಕ್ ವಿಧಾನ ಬಳಸಿ ನೋಡಿ

ಸೌಂದರ್ಯವೆನ್ನುವುದು ನಮ್ಮ ದೇಹದ ಒಂದು ಸಾಧನ. ಇದು ಕಾಂತಿಯುತವಾಗಿದ್ದಷ್ಟು ಆಕರ್ಷಣೆಯು ಹೆಚ್ಚು. ಸೌಂದರ್ಯವಿಲ್ಲದೆ ಇದ್ದರೆ ಆಗ ಖಂಡಿತವಾಗಿಯೂ ಹೆಚ್ಚಿನವರು ನಿಮ್ಮನ್ನು ಕಡೆಗಣಿಸಬಹುದು. ಪ್ರಕೃತಿದತ್ತವಾಗಿ ಇರುವ ಸೌಂದರ್ಯವನ್ನು ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಕಾಂತಿ ಹೆಚ್ಚಿಸುವುದು ಹೇಗೆ ಎಂದು ತಿಳಿಯುವ.

ಕಡಲೆ ಹಿಟ್ಟಿನ ಫೇಸ್ ಪ್ಯಾಕ್

ಕಡಲೆ ಹಿಟ್ಟು, ಕೆಂಪು ಬೇಳೆ, ಅರಶಿನ ಹುಡಿಯನ್ನು ಸ್ವಲ್ಪ ಹಾಲಿನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ದಪ್ಪ ಪೇಸ್ಟ್ ಆದ ಬಳಿಕ ಇದನ್ನು ದೇಹ ಹಾಗೂ ಮುಖಕ್ಕೆ ಹಚ್ಚಿಕೊಂಡು, ಸುಮಾರು 30-60 ನಿಮಿಷ ಕಾಲ ಹಾಗೆ ಇರಿ. ಇದರ ಬಳಿಕ ನೀವು ಸ್ನಾನ ಮಾಡಿ. ಇದರಿಂದ ತ್ವಚೆಯು ಕಾಂತಿಯುತವಾಗುವುದು.

ತೆಂಗಿನೆಣ್ಣೆ

ಬಿಸಿಲಿಗೆ ಹೊರ ಹೋಗುವ ಮೊದಲು ತೆಂಗಿನ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮವು ಆರೋಗ್ಯಕರ ಹಾಗೂ ಸುಂದರವಾಗಿ ಇರುವುದು. ಅದರಲ್ಲೂ ಚಳಿಗಾಲದಲ್ಲಿ ಇದು ತುಂಬಾ ನೆರವಾಗುವುದು.

ಅಲೋವೆರಾ

ಅಲೋವೆರಾದ ಗಿಡವಿದ್ದರೆ ಆಗ ನೀವು ಇದರ ಒಂದು ಎಲೆ ತೆಗೆದುಕೊಂಡು, ಅದರ ಲೋಳೆ ತೆಗೆಯಿರಿ. ಇದನ್ನು ಮುಖ ಹಾಗೂ ದೇಹದ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಇದು ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು. ನೀವು ನಿಯಮಿತವಾಗಿ ಅಲೋವೆರಾ ಹಚ್ಚಿಕೊಂಡರೆ ಆಗ ಚರ್ಮಕ್ಕೆ ವಯಸ್ಸಾಗುವುದು ನಿಧಾನವಾಗುವುದು ಮತ್ತು ಕಾಂತಿಯು ಬರುವುದು.