ಪೋಷಕರು ಮಕ್ಕಳ ಮಾನಸಿಕ ಸ್ಥಿತಿ ಅರಿಯಬೇಕು

ಪೋಷಕರು ಮಕ್ಕಳ ಮಾನಸಿಕ ಸ್ಥಿತಿ ಅರಿಯಬೇಕು

LK   ¦    Mar 03, 2020 10:13:03 AM (IST)
ಪೋಷಕರು ಮಕ್ಕಳ ಮಾನಸಿಕ ಸ್ಥಿತಿ ಅರಿಯಬೇಕು

ಈಗ ಪರೀಕ್ಷಾ ಕಾಲ.. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಭಯದಲ್ಲಿಯೇ ದಿನ ಕಳೆಯುತ್ತಿದ್ದು, ಪೋಷಕರು ಹೆಚ್ಚಿನ ಒತ್ತಡ ನೀಡಿದರೆ ಕೆಲವೊಮ್ಮೆ ಖಿನ್ನತೆಗೊಳಗಾಗುವ ಸಂದರ್ಭ ಹೆಚ್ಚಿದೆ. ಹೀಗಾಗಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಅರಿತುಕೊಳ್ಳುವುದು ಪೋಷಕರ ಮುಖ್ಯ ಜವಬ್ದಾರಿಯಾಗಿದೆ.

ಪರೀಕ್ಷಾ ಸಮಯದಲ್ಲಿ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಮುಖ್ಯವಾಗಿರುವುದರಿಂದ ಕೇವಲ ಓದು ಎಂಬಂತೆ ಒತ್ತಡ ತರುವುದು ಮಾತ್ರ ಮಾಡದೆ ಎಲ್ಲ ರೀತಿಯಲ್ಲಿಯೂ ಅವರ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ.

ಸಾಮಾನ್ಯವಾಗಿ ಶಾಲಾ ಆರಂಭದ ದಿನಗಳಿಂದ ಇಲ್ಲಿಯವರೆಗೆ ಹೆಚ್ಚಿನ ಓದಿನಲ್ಲಿಯೇ ಕಳೆಯುವ ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಭಯ, ಉದ್ವೇಗಗಳಿಗೆ ಒಳಗಾಗುವುದು ಸಾಮಾನ್ಯ. ಆದ್ದರಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಅವರ ಮೇಲೆ ಒತ್ತಡ ತರುವ ಬದಲು ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕಿದೆ.

ನರರೋಗ ತಜ್ಞ ಡಾ.ಅನಿಲ್ ಆನಂದ್ ಅವರು ಹೇಳುವಂತೆ ಇವತ್ತಿನ ಸ್ಪರ್ಧಾತ್ಮಕ ವ್ಯವಸ್ಥೆಯೊಳಗೆ ಒತ್ತಡ ಹೆಚ್ಚಿದೆ. ಸೃಜನಾತ್ಮಕ ವ್ಯಕ್ತಿತ್ವಕ್ಕೆ ಅವಕಾಶವೇ ಇಲ್ಲದಂತಾಗಿದೆ. ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲಾಗದೆ ಹದಿಹರೆಯದವರು ಒತ್ತಡಕ್ಕೆ ಸಿಲುಕಿ ಬಳಲುತ್ತಿದ್ದಾರೆ. ಪೆÇೀಷಕರು ಹಾಗೂ ಶಾಲಾ-ಕಾಲೇಜುಗಳು ಮಕ್ಕಳ ಮೇಲಿಟ್ಟಿರುವ ಅತಿಯಾದ ನಿರೀಕ್ಷೆ, ಬುದ್ಧಿವಂತ ಮಕ್ಕಳಿಗೆ ಹೆಚ್ಚು ಗಮನಹರಿಸುತ್ತಿರುವುದು ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಲು ಕಾರಣವಾಗಿದೆಯಂತೆ.

ಪರೀಕ್ಷಾ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕುವ ಮಕ್ಕಳು ಮೊಬೈಲ್, ಮಾದಕ ವ್ಯಸನ, ಆತ್ಮಹತ್ಯೆ ಕಡೆ ವಾಲುವ ಭಯವೂ ಇದೆ. ಇಂತಹ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ ಅವುಗಳ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತಾದರೆ ಅವರನ್ನು ಒತ್ತಡದಿಂದ ಹೊರತರಬಹುದಾಗಿದೆ. ಪರೀಕ್ಷಾ ಸಮಯ ಮಾತ್ರವಲ್ಲದೆ, ಇತರೆ ಸಮಯಗಳಲ್ಲಿ ಹದಿ ಹರೆಯದಲ್ಲಿರುವ ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸುವ ಬದಲು ಪೆÇೀಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಅವರ ಬೆಂಬಲಕ್ಕೆ ನಿಲ್ಲಬೇಕು. ಆತ್ಮವಿಶ್ವಾಸ ಮೂಡಿಸುವುದರೊಂದಿಗೆ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಬೇಕು. ಅವರಲ್ಲಿರುವ ನಿಜವಾದ ಪ್ರತಿಭೆಯನ್ನು ಹೊರತಂದು ಕೀಳರಿಮೆಯನ್ನು ದೂರ ಮಾಡುವುದು ಅಗತ್ಯವಾಗಿದೆ.

ಶಾಲಾ ದಿನಗಳಿಂದಲೇ ಮಕ್ಕಳು ಸಾಮಾಜಿಕ ಜಾಲ ತಾಣ ಹಾಗೂ ಅಂತರ್ಜಾಲವನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವರೇ ಇಲ್ಲವೇ ಎಂಬ ಬಗ್ಗೆ ಜಾಗೃತಿ ವಹಿಸಬೇಕು ಜತೆಗೆ ಒಳ್ಳೆಯ ಆಹಾರ ಸೇವನೆ ಮಾಡುವಂತೆ ಪ್ರೇರೇಪಿಸುವ ಜೊತೆಗೆ ಯೋಗ, ಕ್ರೀಡೆ, ಸಂಗೀತ, ನೃತ್ಯದಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಅವರು ಭವಿಷ್ಯವನ್ನು ಸುಂದರವಾಗಿ ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿದೆ.

ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಪ್ರವೃತ್ತಿಯನ್ನು ಪೆÇೀಷಕರು ರೂಢಿಸಿಕೊಂಡು ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಒಳ್ಳೆಯ ಆಲೋಚನೆಗಳು ಅವರಲ್ಲಿ ಬೆಳೆಯುವಂತೆ ಮಾಡುವ ಅವಶ್ಯವಿದೆ. ಅವರ ಸಮಸ್ಯೆಗಳನ್ನು ಅರಿತು ಆಪ್ತ ಸಮಾಲೋಚನೆ ಮೂಲಕ ಪರಿಹಾರ ಸೂಚಿಸಿದಲ್ಲಿ ಮಕ್ಕಳ ಬೆಳವಣಿಗೆಗೆ ನೆರವಾಗುತ್ತದೆ.

ಇಂಟರ್‍ನೆಟ್, ಸ್ಮಾರ್ಟ್‍ಫೋನ್ ಬಳಕೆಯಿಂದ ಅವರನ್ನು ಸಂಪೂರ್ಣವಾಗಿ ದೂರವಿಡಲಾಗದು. ಆದರೆ, ಅದನ್ನು ಅವರು ಯಾವ ರೀತಿ ಬಳಕೆ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ನಿಗಾ ವಹಿಸಬೇಕು. ಈ ಬಗ್ಗೆ ಆರಂಭದಿಂದಲೇ ಹೆಚ್ಚಿನ ಕಾಳಜಿ ವಹಿಸುವುದರಿಂದ ಮಕ್ಕಳು ಹಾದಿ ತಪ್ಪುವುದನ್ನು ಅಷ್ಟೇ ಅಲ್ಲದೆ ಓದಿನ ಬಗ್ಗೆ ಆಸಕ್ತಿ ಕಳೆದು ಕೊಳ್ಳುವುದನ್ನು ಅಥವಾ ಪರೀಕ್ಷೆಗೆ ಹೆದರಿ ಖಿನ್ನತೆಗೊಳಗಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಮೊದಲಾದವುಗಳಿಂದ ಹೊರಬರಲು ಸಾಧ್ಯವಾಗಲಿದೆ.