ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಒಂದಿಷ್ಟು…

ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಒಂದಿಷ್ಟು…

HSA   ¦    Jan 25, 2020 05:19:04 PM (IST)
ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಒಂದಿಷ್ಟು…

ಚೀನಾದಲ್ಲಿ ಮಾರಣಾಂತಿಕವಾಗಿ ಹಬ್ಬುತ್ತಿರುವಂತಹ ಕೊರನಾ ವೈರಸ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದು ಹಲವಾರು ದೇಶಗಳಲ್ಲಿ ಈಗಾಗಲೇ ಹಬ್ಬಿದೆ. ಕೊರೊನಾ ವೈರಸ್ ಎಂದರೇನು? ಅದರ ಲಕ್ಷಣಗಳು ಏನು ಮತ್ತು ಯಾವ ಚಿಕಿತ್ಸೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳುವ.

ಏನಿದು ಕೊರೊನಾ ವೈರಸ್?

ಸೂರ್ಯನ ಕರೋನಾವನ್ನು ಹೋಲುವ ವೈರಸ್ ಅವುಗಳ ಪೊರೆಗಳಿಂದ ಚಾಚಿಕೊಂಡಿರುವ ಸ್ಟ್ರೈಕ್ ಗಳಿಗೆ ಕೊರೊನಾ ವೈರಸ್ ಎಂದು ಹೆಸರಿಡಲಾಗಿದೆ. ಇದು ಪ್ರಾಣಿಗಳು ಹಾಗೂ ಮನುಷ್ಯರನ್ನು ಕಾಡಬಹುದು. ಇದರಿಂದ ಅನಾರೋಗ್ಯ ಹಾಗೂ ಶ್ವಾಸಕೋಶದ ಸಮಸ್ಯೆಯು ಕಾಡಬಹುದು. ಇದು ಸಾರ್ಸ್ ನಷ್ಟೇ ತುಂಬಾ ಅಪಾಯಕಾರಿ ಆಗಿದ್ದು, 2003ರಲ್ಲಿ ಇದು ಪತ್ತೆಯಾದ ಬಳಿಕ ವಿಶ್ವದೆಲ್ಲೆಡೆಯಲ್ಲಿ ಇದುವರೆಗೆ ಸುಮಾರು 800 ಮಂದಿ ಮೃತಪಟ್ಟಿದ್ದಾರೆ.

ಇದು ಎಷ್ಟು ಅಪಾಯಕಾರಿ

ವಿಶ್ವದೆಲ್ಲೆಡೆಯಲ್ಲಿನ ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ಎಚ್ಚರಿಕೆ ನೀಡಿರುವರು. ಆದರೆ ಹೊಸ ವೈರಸ್ ನ ತೀವ್ರತೆಯನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಆದರೆ ಇಲ್ಲಿ ಮುಖ್ಯ ವಿಚಾರವೆಂದರೆ ಚೀನಾದ ಅಧಿಕಾರಿಗಳು ವೈರಸ್ ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ನಿಖರವಾಗಿ ಹೇಳುತ್ತಿದ್ದಾರೆ ಎನ್ನುವುದು. ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಗೊಂದಲವಿದೆ.

ಇದು ಹೇಗೆ ಹರಡುತ್ತದೆ?

ಈ ವೈರಸ್ ಹೇಗೆ ಹರಡುತ್ತದೆ ಎಂದು ಪತ್ತೆ ಮಾಡಲು ವೈದ್ಯಕೀಯ ಲೋಕಕ್ಕೆ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹಬ್ಬಬಹುದು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುದಕ್ಕಿಂತಲೂ ಇದು ಹೆಚ್ಚು ಅಪಾಯಕಾರಿ ಆಗಿದೆ ಎಂದು ವಾಷಿಂಗ್ಟನ್ ನ ಯೂನಿವರ್ಸಿಟಿಯ ಡಾ. ಪೀಟರ್ ರಾಬಿನೊವಿಟ್ಜ್ ಎಚ್ಚರಿಸುವರು.

ಕೆಮ್ಮು, ಶೀನು ಮೂಲವಾಗಿ ಈ ವೈರಸ್ ಹಬ್ಬಬಹುದು ಮತ್ತು ಬೇರೆಯವರ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಪೀಟರ್ ತಿಳಿಸಿದ್ದಾರೆ.

ರೋಗಿಯಲ್ಲಿ ಶೀತ, ಜ್ವರ, ಕೆಮ್ಮು ಮತ್ತು ನ್ಯುಮೋನಿಯಾದ ಲಕ್ಷಣಗಳು ಕಾಣಿಸಿಕೊಳ್ಳುವುದು ಎಂದು ಹೇಳಲಾಗುತ್ತಿದೆ.

 

ಯಾವ ಚಿಕಿತ್ಸೆ ಲಭ್ಯವಿದೆಯಾ?

ಕೊರೊನಾವೈರಸ್ ಗೆ ಇದುವರೆಗೆ ಯಾವುದೇ ಔಷಧಿಯು ಲಭ್ಯವಿಲ್ಲ. ರೋಗಿಗೆ ಸರಿಯಾದ ಆಮ್ಲಜನಕ ಮತ್ತು ವೆಂಟಿಲೇಟರ್ ಮೂಲಕ ಗಾಳಿಯನ್ನು ಶ್ವಾಸಕೋಸಕ್ಕೆ ತಲುಪಿಸುವುದು ಅಗತ್ಯವಾಗಿದೆ ಎಂದು ವೈದ್ಯರು ಹೇಳುತ್ತಾರೆ.