ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೀನಿ: ವದಂತಿಗೆ ಸ್ಪಷ್ಟನೆ ನೀಡಿದ ದ್ವಾರಕೀಶ್

ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೀನಿ: ವದಂತಿಗೆ ಸ್ಪಷ್ಟನೆ ನೀಡಿದ ದ್ವಾರಕೀಶ್

YK   ¦    Jul 16, 2019 03:03:35 PM (IST)
ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೀನಿ: ವದಂತಿಗೆ ಸ್ಪಷ್ಟನೆ ನೀಡಿದ ದ್ವಾರಕೀಶ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಹರಿದಾಡಿದ್ದ ಗಾಳಿಸುದ್ದಿಗೆ ಖುದ್ದಾಗಿ ನಟ ದ್ವಾರಕೀಶ್ ಅವರೇ ಇಂದು ಸ್ಪಷ್ಟನೆ ನೀಡಿ ವಿಡಿಯೋ ವೊಂದನ್ನು ಅಪ್ಲೋಡ್ ಮಾಡಿ ‘ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೀನಿ’ ಎಂದು ಹೇಳಿಕೊಂಡಿದ್ದಾರೆ.

‘ನಮಸ್ಕಾರ ನಿಮ್ಮ ದ್ವಾರಕೀಶ್, ನಿಮ್ಮ ಕರ್ನಾಟಕದ ಕುಳ್ಳ ಆರೋಗ್ಯವಾಗಿದ್ದೀನಿ. ಹುಷಾರಾಗಿದ್ದೀನಿ. ಯಾವುದೇ ತರಹದ ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ. ಏನಾದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ್ ಚೆನ್ನಾಗಿದ್ದಾನೆ. ಚೆನ್ನಾಗಿರುತ್ತೇನೆ. ಎಲ್ಲ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಎಂದು ಹಿರಿಯ ನಟ ದ್ವಾರಕೀಶ್ ಹಂಚಿಕೊಂಡಿದ್ದಾರೆ.