ಹಾಸ್ಯ ನಟ ಕವಿ ಕುಮಾರ್ ಅಜಾದ್ ನಿಧನ

ಹಾಸ್ಯ ನಟ ಕವಿ ಕುಮಾರ್ ಅಜಾದ್ ನಿಧನ

HSA   ¦    Jul 09, 2018 05:58:22 PM (IST)
ಹಾಸ್ಯ ನಟ ಕವಿ ಕುಮಾರ್ ಅಜಾದ್ ನಿಧನ

ಮುಂಬಯಿ: ಹಿಂದಿ ಕಿರುತೆರೆ ನಟ ಕವಿ ಕುಮಾರ್ ಅಜಾದ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು ಎಂದು ವರದಿಗಳು ಹೇಳಿವೆ.

ಕವಿ ಕುಮಾರ್ ಅಜಾದ್ ಸೋನಿ ಸಬ್ ಟಿವಿಯಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ `ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ' ಜನಪ್ರಿಯ ಧಾರಾವಾಹಿಯಲ್ಲಿ ಡಾ. ಹಾಥಿ ಪಾತ್ರವನ್ನು ಮಾಡುತ್ತಲಿದ್ದರು.

ಅಜಾದ್ ಅವರಿಗೆ ಇಂದು ಬೆಳಗ್ಗೆ ತೀವ್ರ ಹೃದಯಾಘಾತವಾಗಿ ಮಿರಾ ರೋಡ್ ನಲ್ಲಿರುವ ವೊಕ್ಹಾಡ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು `ತಾರಕ್ ಮೆಹ್ತಾ ಕಾ ಉಲ್ಟಾ ಚಸ್ಮಾ'ದ ನಿರ್ಮಾಪಕ ಅಸಿತ್ ಕುಮಾರ್ ಮೋದಿ ತಿಳಿಸಿದರು.

ಕವಿ ಕುಮಾರ್ ಅಜಾದ್ ಅವರು ಅದ್ಭುತ ನಟ ಮತ್ತು ತುಂಬಾ ಧನಾತ್ಮಕವಾಗಿದ್ದ ವ್ಯಕ್ತಿ. ಅವರು ತಮ್ಮ ಪಾತ್ರವನ್ನು ತುಂಬಾ ಆನಂದಿಸುತ್ತಿದ್ದರು ಎಂದು ಅಸಿತ್ ಕುಮಾರ್ ಮೋದಿ ಹೇಳಿದರು.