ಲಾಂಗ್ ಬ್ರೇಕ್ ಬಳಿಕ ಜನರಿಗೆ ಸಂತಸದ ಸುದ್ದಿ ತಿಳಿಸಿದ ಶ್ವೇತಾ ಶ್ರೀವಾತ್ಸವ್

ಲಾಂಗ್ ಬ್ರೇಕ್ ಬಳಿಕ ಜನರಿಗೆ ಸಂತಸದ ಸುದ್ದಿ ತಿಳಿಸಿದ ಶ್ವೇತಾ ಶ್ರೀವಾತ್ಸವ್

YK   ¦    Oct 07, 2019 01:20:59 PM (IST)
ಲಾಂಗ್ ಬ್ರೇಕ್ ಬಳಿಕ ಜನರಿಗೆ ಸಂತಸದ ಸುದ್ದಿ ತಿಳಿಸಿದ ಶ್ವೇತಾ ಶ್ರೀವಾತ್ಸವ್

ನಟಿ ಶ್ವೇತಾ ಶ್ರೀವಾತ್ಸವ್ ಜನರಿಗೆ ದಸರಾ ಹಬ್ಬದ ಶುಭಕೋರಿ  ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಾದ ಬಳಿಕ ಲಾಂಗ್ ಬ್ರೇಕ್ ಪಡೆದುಕೊಂಡು ಮಗಳ ಜತೆ ಕಾಲ ಕಳೆದ ನಟಿ ಶ್ವೇತಾ ಇದೀಗ ಚಿತ್ರರಂಗಕ್ಕೆ ವಾಪಾಸ್ಸಾಗುವ ಸುದ್ದಿಯನ್ನು ತಿಳಿಸಿದ್ದಾರೆ. ‘ರಹದಾರಿ’ ಚಿತ್ರವೊಂದಕ್ಕೆ ಸಹಿಹಾಕಿರುವ ಸಂತಸದ ಸುದ್ದಿಯನ್ನು ದಸರಾ ಹಬ್ಬದಂದು ಹಂಚಿಕೊಂಡಿದ್ದಾರೆ.  

ಈ ಚಿತ್ರವನ್ನು ಗಿರೀಶ್ ವೈರಮುಡಿ ನಿರ್ದೇಶನ ಮಾಡುತ್ತಿದ್ದು, ಮಂಜುನಾಥ್ ಶಾಮನೂರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ರೋಣದ ಬಕ್ಕೇಶ್ ಹಾಗೂ ಕೆ.ಸಿ.ರಾವ್ ನೀಡಿದ್ದಾರೆ. ರಹದಾರಿ ಚಿತ್ರದಲ್ಲಿ ಶ್ವೇತಾ ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

2017 ಜುಲೈ 21ರಂದು ಶ್ವೇತಾ ಶ್ರೀವಾತ್ಸವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ತಾಯ್ತಣದ ಕಾರಣಕ್ಕೆ ಮೂರು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ್ ಮತ್ತೇ ಒಳ್ಳೆಯ ಕಥೆಯೊಂದಿಗೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.