ನಟಿ ಮೇಘನಾ ರಾಜ್ ಜತೆ ಮದುವೆ ವದಂತಿ ಕುರಿತು ಸ್ಪಷ್ಟನೆ ನೀಡಿದ ನಟ ಚಿರಂಜೀವಿ

ನಟಿ ಮೇಘನಾ ರಾಜ್ ಜತೆ ಮದುವೆ ವದಂತಿ ಕುರಿತು ಸ್ಪಷ್ಟನೆ ನೀಡಿದ ನಟ ಚಿರಂಜೀವಿ

Oct 09, 2017 05:01:09 PM (IST)
ನಟಿ ಮೇಘನಾ ರಾಜ್ ಜತೆ ಮದುವೆ ವದಂತಿ ಕುರಿತು ಸ್ಪಷ್ಟನೆ ನೀಡಿದ ನಟ ಚಿರಂಜೀವಿ

ಬೆಂಗಳೂರು: ಸ್ಯಾಂಡಲ್ವುಡ್ನ ನಟಿ ಮೇಘನಾ ರಾಜ್ ಜತೆ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿಯುತ್ತಿದ್ದಂತೆ ನಟ ಚಿರಂಜೀವಿ ಸರ್ಜಾ ಈ ಕುರಿತು ಸ್ಪಷ್ಟನೆ ನೀಡುತ್ತಾ ಮದುವೆ ವಿಚಾರ ಮುಚ್ಚಿಡುವಂತಹ ವಿಷಯನೇ ಅಲ್ಲ, ಈ ಕುರಿತು ಕುಟುಂಬಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆ ನಿಶ್ಚಿತಾರ್ಥ ಇದೇ ತಿಂಗಳು 22ಕ್ಕೆ ನಡೆಯಲಿದೆ ಎಂದು ಚಂದನವನದಲ್ಲಿ ಹರಿದಾಡುತ್ತಿದೆ. ಇದೇ ಡಿಸೆಂಬರ್ನಲ್ಲಿ ಮೇಘನಾ ಮತ್ತು ಚಿರಂಜೀವಿ ಸರ್ಜಾ ಮದುವೆ ದಿನಾಂಕ ನಿಗದಿಯಾಗಿದ್ದು ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ ಎಂದು ಸುದ್ದಿ ಹರಿಯುತ್ತಿತ್ತು.

ಮದುವೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಮದುವೆ ದಿನಾಂಕನೂ ನಿಗದಿಯಾಗಿಲ್ಲ. ಏನಾದರೂ ಇದ್ದರೆ ಎಲ್ಲರಿಗೆ ತಿಳಿಸುತ್ತೇವೆ ಎಂದು ನಟ ಚಿರಂಜೀವಿ ಸರ್ಜಾ ಸ್ಪಷ್ಟನೆ ನೀಡಿದ್ದಾರೆ.

ಸ್ಯಾಂಡಲ್ವುಡ್ನ ತಾರಾ ಜೋಡಿಗಳಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್. ಕನ್ನಡ ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಚಿರಂಜೀವಿ ಖ್ಯಾತ ನಟ ಅರ್ಜುನ್ ಸರ್ಜಾ ಸೋದರಳಿಯನಾಗಿದ್ದು ವಾಯುಪುತ್ರ, ವರದನಾಯಕ, ಆಟಗಾರ ಮುಂತಾದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.