ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಮೃತದೇಹ ಪತ್ತೆ

YK   ¦    Mar 10, 2018 03:51:41 PM (IST)
ನೇಣು ಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಮೃತದೇಹ ಪತ್ತೆ

ಕೋಲ್ಕತ್ತಾ: ಇಲ್ಲಿನ ಯುವ ಕಿರುತೆರೆ ನಟಿಯೊಬ್ಬಳ ಮೃತದೇಹ ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ನಟಿಯನ್ನು 23 ವರುಷದ ಮೌಮಿತಾ ಎಂದು ಗುರುತಿಸಲಾಗಿದೆ.

ನಟಿ ವಾಸವಿದ್ದ ಫ್ಲಾಟ್ ಕಳೆದ ಮಧ್ಯಾಹ್ನ ದಿಂದ ಬಾಗಿಲು ಮುಚ್ಚಿದ್ದರಿಂದ ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ರೂಂ ನಲ್ಲಿ ಫ್ಯಾನ್ ಗೆ ನೇಣು ಹಾಕಿ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆಯಾಗಿದೆ.

ಇನ್ನೂ ಕೋಣೆಯಲ್ಲಿ ಸಿಕ್ಕಿದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೂ ನಟಿ ಈ ಫ್ಲಾಟ್ ನಲ್ಲಿ ಕೆಲ ತಿಂಗಳಿನಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಖಿನ್ನತೆಗೊಳಗಾಗಿ ನಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.