ಭರಪೂರ ಮನರಂಜನೆಯ ಚಿತ್ರ ‘ಅರೆಮರ್ಲೆರ್’

ಭರಪೂರ ಮನರಂಜನೆಯ ಚಿತ್ರ ‘ಅರೆಮರ್ಲೆರ್’

YK   ¦    Aug 11, 2017 03:48:34 PM (IST)
ಭರಪೂರ ಮನರಂಜನೆಯ ಚಿತ್ರ  ‘ಅರೆಮರ್ಲೆರ್’

ನಿರ್ದೇಶಕ, ನಟ ದೇವದಾಸ್ ಕಾಪಿಕಾಡ್ ಅವರು ಕರಾವಳಿ ಜನತೆಯ ಅಭಿರುಚಿಗೆ ತಕ್ಕದಾಗಿ ‘ಅರೆಮರ್ಲೆರ್’ ಚಿತ್ರವನ್ನು ನಿರ್ದೇಶಿಸಿ, ಜನರಿಗೆ ನಗುವಿನ ರಸದೌತನವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರ ಸಂಪೂರ್ಣ ಹಾಸ್ಯ ಮನೋರಂಜನೆಯಿಂದ ಕೂಡಿದ್ದು, ಚಿತ್ರದ ಕೇಂದ್ರ ಬಿಂದುವಾಗಿ ನಟ ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು ಮತ್ತು ಅರವಿಂದ್ ಬೋಳಾರ್ ನಟಿಸಿದ್ದಾರೆ. ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ನಗುವಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ಚಿತ್ರವನ್ನು ಹೆಣೆದಿದ್ದಾರೆ. ಚಿತ್ರದಲ್ಲಿ ಯಾವುದೇ ಥ್ರಿಲಿಂಗ್ ಘಟನೆಗಳು ಇಲ್ಲದಿದ್ದರೂ ಚಿತ್ರ ಎಲ್ಲಿಯೂ ನೋಡುಗರಿಗೆ ಸಪ್ಪೆ ಎನಿಸಿಸುವುದಿಲ್ಲ. ಚಿತ್ರದಲ್ಲಿ ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಮತ್ತು ದೇವದಾಸ್ ಕಾಪಿಕಾಡ್ ಅವರ ಜುಗಲ್ ಬಂದಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಕೇಳಲು ಇಂಪಾಗಿವೆ. ಒಂದು ಹಾಡಿನಲ್ಲಿ ಅರ್ಜುನ್ ಕಾಪಿಕಾಡ್ ಐಟಂ ಡಾನ್ಸ್ ಗೆ ಹುಡುಗಿ ಗೆಟಪ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ವಿಲನ್ ಪಾತ್ರಧಾರಿ ಅರ್ಜುನ್ ಕಜೆ ತಮ್ಮ ಅಭಿನಯದ ಮೂಲಕ ಕೋಸ್ಟಲ್ ವುಡ್ ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ನಾಯಕಿ ನಿಶ್ಮಿತಾ,ಬಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಛಾಯಾಗ್ರಾಹಕರಾಗಿ ಉದಯ ಬಲ್ಲಾಳ್ ದೃಶ್ಯಾವಳಿಗಳನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ. ಸಂಕಲನಕಾರರಾಗಿ ಸುಜೀತ್ ನಾಯಕ್, ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತದಲ್ಲಿ ದುಡಿದಿದ್ದಾರೆ. ರಾಜೇಶ್ ಕುಡ್ಲ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವದಾಸ್ ಕಾಪಿಕಾಡ್ ನಿರ್ವಹಿಸಿದ್ದಾರೆ. ಬೊಳ್ಳಿ ಮೂವೀಸ್ ಲಾಂಛನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಲಕ್ಷ್ಮಣ ಕುಮಾರ್ ಮಲ್ಲೂರು, ಕಾವ್ಯ ಬಂಗೇರ, ಸರೋಜಿನಿ ಶೆಟ್ಟಿ, ಗೋಪಿನಾಥ್ ಭಟ್, ಅರ್ಜುನ್ ಕಜೆ, ಚೇತನ್ ರೈ ಮಾಣಿ, ಸಾಯಿಕೃಷ್ಣ , ಸತೀಶ್ ಬಂದಲೆ, ಹರೀಶ್ ವಾಸು ಶೆಟ್ಟಿ ಮುಂಬಯಿ, ಗಿರೀಶ್ ಶೆಟ್ಟಿ ಕಟೀಲು, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಾಂಡುರಂಗ ಅಡ್ಯಾರ್, ಚಿದಾನಂದ ದುಬೈ ಅಭಿನಯಿಸಿದ್ದಾರೆ ಅವರ ಅಭಿನಯ ನೈಜವಾಗಿ ಮೂಡಿಬಂದಿದೆ.