ಮಗಳ ಜತೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅನು- ರಘು ಮುಖರ್ಜಿ

ಮಗಳ ಜತೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅನು- ರಘು ಮುಖರ್ಜಿ

YK   ¦    Nov 08, 2018 10:45:18 AM (IST)
ಮಗಳ ಜತೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ ಅನು- ರಘು ಮುಖರ್ಜಿ

ಬೆಂಗಳೂರು: ಚಂದನವನದ ಸ್ಟಾರ್ ದಂಪತಿಗಳಾದ ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು ನಾಡಿನ ಜನತೆಗೆ ದೀಪಾವಳಿ ಶುಭಾಶಯವನ್ನು ತಮ್ಮ ಮುದ್ದಿನ ಮಗಳೊಂದಿಗೆ ತಿಳಿಸಿದ್ದಾರೆ.

ಟ್ವಿಟರ್ ನಲ್ಲಿ ಮಗಳ ಪೋಟೋವನ್ನು ರಿವೀಲ್ ಮಾಡಿದ ದಂಪತಿ,' ಈ ವರ್ಷ ನಮ್ಮ ದೀಪಾವಳಿ ಬಹಳ ವಿಶೇಷ... ನಮ್ಮ ಮಗಳು ಹಾಗು ನಮಿಂದ ನಿಮ್ಮೆಲ್ಲರಿಗು ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

2016 ಏಪ್ರಿಲ್ 25ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದು ಎರಡನೇ ಮದುವೆಯಾಗಿದ್ದು ಈ ದಂಪತಿಗೆ ಆಗಸ್ಟ್ 15ರಂದು ಹೆಣ್ಣು ಮಗುವಾಗಿದೆ.