ಹೆತ್ತವರು ಆಶ್ರಮ ಪಾಲಾಗಲು ನಮ್ಮ ಎಜುಕೇಶನ್ ಸಿಸ್ಟಂ ಕೂಡಾ ಕಾರಣ

ಹೆತ್ತವರು ಆಶ್ರಮ ಪಾಲಾಗಲು ನಮ್ಮ ಎಜುಕೇಶನ್ ಸಿಸ್ಟಂ ಕೂಡಾ ಕಾರಣ

Apr 21, 2018 06:01:08 PM (IST)
ಹೆತ್ತವರು ಆಶ್ರಮ ಪಾಲಾಗಲು ನಮ್ಮ ಎಜುಕೇಶನ್ ಸಿಸ್ಟಂ ಕೂಡಾ ಕಾರಣ

ಈಗೇನಿದ್ದರೂ ಸ್ಪರ್ಧಾತ್ಮಕ ಜಗತ್ತು, ಸ್ವಲ್ಪ ಯಾಮಾರಿದ್ರೂ ನಾವು ತುಂಬಾ ಹಿಂದೆ ಉಳಿದು ಬಿಡ್ತೀವಿ. ನಮ್ಮ ಮಕ್ಕಳು ದೊಡ್ಡವರಾರದ ಮೇಲೆ ದೊಡ್ಡ ಕೆಲಸದಲ್ಲಿರಬೇಕು, ಕೈತುಂಬಾ ದುಡೀಬೇಕು ಎಂದು ಎಲ್ಲ ಹೆತ್ತವರ ಆಸೆ. ಹಾಗಾಗಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಲು ತಯಾರಿ ಮಗು ಹೊಟ್ಟೆಯಲ್ಲಿರುವಾಗಲೇ ಶುರುವಾಗುತ್ತದೆ.

ಮೊದಲ ಹೆಜ್ಜೆ ಮಗುವಿಗೆ ಉತ್ತಮ ಶಾಲೆಗೆ ಸೇರಿಸುವುದಾದರೆ, ಎರಡನೆಯದು ಮಕ್ಕಳಿಗೆ ಅದಕ್ಕೆ ಪೂರಕವಾದ ಕಲೆಗಳ ಟ್ರೈನಿಂಗ್. ಹೀಗೆ ಮಕ್ಕಳಿಗೆ ಕರಿಯರ್ ಓರಿಯೆಂಟೆಡ್ ಟ್ರೈನಿಂಗ್ ಚಿಕ್ಕಂದಿನಿಂದಲೇ ಪ್ರಾರಂಭವಾಗುತ್ತದೆ. ಇದರಿಂದಾಗಿ ಇಂದಿನ ಮಕ್ಕಳು ಆಟದಿಂದ ಹಿಡಿದು, ಕುಟುಂಬದೊಂದಿಗೆ ಸಮಯ ಕಳೆಯಲೂ ಪುರುಸೊತ್ತು ಇಲ್ಲದಷ್ಟು ಬ್ಯುಸಿಯಾಗಿದ್ದರೆ, ತಂದೆ ತಾಯಂದಿರು ಕೂಡಾ ಕೆಲಸದ ಒತ್ತಡದಿಂದಾಗಿ, ಮಕ್ಕಳೊಂದಿಗೆ ಸಮಯ ಕಳೆಯಲಾಗುತ್ತಿಲ್ಲ. ಹೀಗಾಗಿ, ಮಕ್ಕಳಿಗೆ ಬಾವನೆಗಳು ಹಾಗೂ ಸಂಬಂಧಗಳ ಬೆಲೆ ಕಡಿಮೆಯಾಗುತ್ತಿದೆ. ತಂದೆ ತಾಯಂದಿರು ಮಕ್ಕಳನ್ನು ಹೇಗೆ ಕರಿಯರ್ ಓರಿಯೆಂಟೆಡ್ ಆಗಿ ಬೆಳೆಸುತ್ತಿದ್ದಾರೋ ಅದೇ ಕರಿಯರ್ ಗೋಸ್ಕರ ಮಕ್ಕಳು ಹೆತ್ತವರನ್ನ ಆಶ್ರಮದಲ್ಲಿ ಇಡುವ ನಿದರ್ಶನಗಳು ಜಾಸ್ತಿಯಾಗಿವೆ.

ಅಸತೋಮ ಸದ್ಗಮಯ ಕನ್ನಡ ಚಲನಚಿತ್ರದಲ್ಲಿ ಈ ಒಂದು ಸೂಕ್ಷ್ಮ ವಿಚಾರವನ್ನ ತುಂಬಾ ಅಚ್ಚುಕಟ್ಟಾಗಿ ಮತ್ತು ತುಂಬಾ ಎಂಟರ್ಟೈನಿಂಗಾಗಿ ಪ್ರೆಸೆಂಟ್ ಮಾಡಲಾಗಿದೆ. ಇದಕ್ಕೆ ಬರೀ ಹೆತ್ತವರು ಮಾತ್ರ ಕಾರಣವಲ್ಲದೆ, ಈಗಿನ ಎಜುಕೇಶನ್ ಸಿಸ್ಟಂ ಕೂಡಾ ಕಾರಣವಾಗಿದೆ. ಹಾಗಾಗಿ ಎಜುಕೇಶನ್ ಸಿಸ್ಟಂ ಹೇಗಿರಬೇಕು, ಮುಚ್ಚುತ್ತಿರುವ ಸರಕಾರಿ ಶಾಲೆಗಳು ಉಳಿಯಬೇಕಾದರೆ ಏನು ಮಾಡಬೇಕು ಎಂಬುದನ್ನ ಕೂಡಾ ಈ ಚಿತ್ರದಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಿರ್ದೇಶಕರಾದ ರಾಜೇಶ್ ವೇಣೂರು. ಅಸತೋಮ ಸದ್ಗಮಯ ಒಂದು ಸಾಂಸಾರಿಕ ಚಿತ್ರವಾಗಿದ್ದು, ಮಕ್ಕಳು ಮತ್ತು ಹೆತ್ತವರು ನೋಡಲೇಬೇಕಾದ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಕಿರಣ್ ರಾಜ್ ಮತ್ತು ಲಾಸ್ಯ ನಾಗರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.