‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ಟಿ ಹೇಳಿಕೆ: ಚಿತ್ರದ ಬೆಂಬಲಕ್ಕೆ ನಿಂತ ನಟ ಕಮಲ್ ಹಾಸನ್

‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ಟಿ ಹೇಳಿಕೆ: ಚಿತ್ರದ ಬೆಂಬಲಕ್ಕೆ ನಿಂತ ನಟ ಕಮಲ್ ಹಾಸನ್

Oct 21, 2017 04:10:05 PM (IST)
‘ಮೆರ್ಸಲ್’ ಚಿತ್ರದಲ್ಲಿ ಜಿಎಸ್ಟಿ ಹೇಳಿಕೆ: ಚಿತ್ರದ ಬೆಂಬಲಕ್ಕೆ ನಿಂತ ನಟ ಕಮಲ್ ಹಾಸನ್

ತಮಿಳು ನಟ ವಿಜಯ್ ನಾಯಕತ್ವದ 'ಮೆರ್ಸಲ್‌' ಚಿತ್ರದಲ್ಲಿ ಜಿಎಸ್‌ಟಿ, ಡಿಜಿಟಲ್ ಇಂಡಿಯಾ ಯೋಜನೆಗಳ ಕುರಿತು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.

ಚಿತ್ರದಲ್ಲಿರುವ ಕೆಲವು ದೃಶ್ಯಗನ್ನು ಕಟ್ ಮಾಡುವಂತೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ತಮಿಳಸೈ ಸೌಂದರಾಜನ್ ಕೂಡ ಆಗ್ರಹಿಸಿದ್ದರು. ಇದೀಗ ಚಿತ್ರತಂಡದ ಬೆಂಬಲಕ್ಕೆ

ಚಿತ್ರರಂಗದ ಹಲವಾರು ನಟ ನಿರ್ದೇಶಕರು ನಿಂತಿದ್ದಾರೆ. ರಾಜಕೀಯದ ಕನಸನ್ನು ಕಟ್ಟಿಕೊಂಡಿರುವ ನಟ ಕಮಲ್ ಹಾಸನ್, ಕಬಾಲಿ ನಿರ್ದೇಶಕ ಪಾ ರಂಜಿತ್, ಪಿ.ಸಿ ಶ್ರೀರಾಮ್ , ಶ್ರೀ ವಿದ್ಯಾ ಸೇರಿದಂತೆ ಹಲವರು ನಟರು ಚಿತ್ರದ ಬೆಂಬಲಕ್ಕೆ ಸಾಥ್ ನೀಡಿದ್ದಾರೆ. ಈ ವಿಚಾರದ ಕುರಿತು ಟ್ವೀಟ್ ಮಾಡಿದ ಕಮಲ್ ಹಾಸನ್ “ ಈ ಚಿತ್ರವನ್ನು ಈಗಾಗಲೇ ಸೆನ್ಸಾರ್ ಮಾಡಲಾಗಿದೆ. ಮತ್ತೊಮ್ಮೆ ಸೆನ್ಸಾರ್ ಮಾಡುವ ಅಗತ್ಯತೆಯಿಲ್ಲ. ಜಿಎಸ್ಟಿ ವಿಮರ್ಶಕರನ್ನು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿಗೆ ಈ ಮೂಲಕ ಟಾಂಗ್ ನೀಡಿದ್ದಾರೆ