ಕಿರುತೆರೆ ನಟಿ ಮೇಲೆ ಸ್ನೇಹಿತನಿಂದ ಹಲ್ಲೆ: ದೂರು

ಕಿರುತೆರೆ ನಟಿ ಮೇಲೆ ಸ್ನೇಹಿತನಿಂದ ಹಲ್ಲೆ: ದೂರು

YK   ¦    Oct 07, 2018 11:47:17 AM (IST)
ಕಿರುತೆರೆ ನಟಿ ಮೇಲೆ ಸ್ನೇಹಿತನಿಂದ ಹಲ್ಲೆ: ದೂರು

ಬೆಂಗಳೂರು: ಕಿರುತೆರೆ ನಟಿ ಜೀವಿತಾ ಉಲ್ಲಾಳ್​ ಮೇಲೆ ಆಕೆಯ ಸ್ನೇಹಿತನೇ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವಿತಾ ಅವರು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಇನ್ನು ದೂರಿನಲ್ಲಿ ಸ್ನೇಹಿತ ಚೇತನ್​ ಟೆಮ್ಕರ್​ ಹಲ್ಲೆ ನಡೆಸಿದ್ದು, ಕಂಠಪೂರ್ತಿ ಕುಡಿದು ಬಂದಿದ್ದಲ್ಲದೆ, ಒಂದು ಗ್ಲಾಸ್​ ನೀರನ್ನು ಕೇಳಿದ್ದಾನೆ.

ಬಾಗಿಲನ್ನು ಮುಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ. ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಜೀವಿತಾ ದೂರು ನೀಡಿದ್ದಾರೆ.