ಸನ್ನಿ ಲಿಯೋನ್ ಗೆ ಹಿಂದೂ ದೇವತೆಗಳ ಪಾತ್ರ ನೀಡದಂತೆ ಎಚ್ಚರಿಕೆ

ಸನ್ನಿ ಲಿಯೋನ್ ಗೆ ಹಿಂದೂ ದೇವತೆಗಳ ಪಾತ್ರ ನೀಡದಂತೆ ಎಚ್ಚರಿಕೆ

HSA   ¦    Dec 06, 2017 09:49:27 AM (IST)
ಸನ್ನಿ ಲಿಯೋನ್ ಗೆ ಹಿಂದೂ ದೇವತೆಗಳ ಪಾತ್ರ ನೀಡದಂತೆ ಎಚ್ಚರಿಕೆ

ಚಂಡೀಗಡ: ಸಿನಿಮಾಗಳಲ್ಲಿ ಸನ್ನಿ ಲಿಯೋನ್ ಳನ್ನು ಹಿಂದೂ ದೇವತೆಗಳ ಪಾತ್ರಗಳಲ್ಲಿ ತೋರಿಸದಂತೆ ನಿರ್ದೇಶಕರಿಗೆ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ಎಚ್ಚರಿಕೆ ನೀಡಿದ್ದಾರೆ.

ಪಂಜಾಬ್ ನವಳಾಗಿರುವ ಸನ್ನಿ ವಿದೇಶದಲ್ಲಿ ಬೆಳೆದದ್ದು. ಆಕೆಯನ್ನು ಸಿನಿಮಾದಲ್ಲಿ ಹಿಂದೂ ದೇವತೆಯಾಗಿ ತೋರಿಸಿದರೆ ನಾವು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಭಾರೀ ವಿವಾದ ಉಂಟುಮಾಡಿರುವಂತಹ ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಸುರಲ್ ಅಮು ಇತ್ತೀಚೆಗೆ ಘೋಷಿಸಿದ್ದರು.

ಡಿ.9ರಂದು ಬೃಹತ್ ರ‍್ಯಾಲಿ ನಡೆಸಿ ಪದ್ಮಾವತಿ ಚಿತ್ರ ನಿಷೇಧ ಮಾಡುವಂತೆ ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.