ಪದ್ಮಾವತಿ ಬಿಡುಗಡೆಗೆ ತಡೆ ಹೇರಲು ಸುಪ್ರೀಂ ನಕಾರ

ಪದ್ಮಾವತಿ ಬಿಡುಗಡೆಗೆ ತಡೆ ಹೇರಲು ಸುಪ್ರೀಂ ನಕಾರ

Nov 10, 2017 02:53:17 PM (IST)
ಪದ್ಮಾವತಿ ಬಿಡುಗಡೆಗೆ ತಡೆ ಹೇರಲು ಸುಪ್ರೀಂ ನಕಾರ

ನವದೆಹಲಿ: ರಾಜಪುತರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಬಿಡುಗಡೆಗೆ ತಡೆ ಹೇರಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಚಿತ್ರದಲ್ಲಿ ರಾಣಿ ಪದ್ಮಾವತಿಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಇದರಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಆದರೆ ಇದುವರೆಗೆ ಸೆನ್ಸರ್ ಬೋರ್ಡ್ ಸಿನಿಮಾಗೆ ಯಾವುದೇ ಸರ್ಟಿಫಿಕೇಟ್ ನೀಡದೆ ಇರುವ ಕಾರಣ ಉಚ್ಛ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.

ಸೆನ್ಸರ್ ಮಂಡಳಿ ಸ್ವತಂತ್ರ ಸಂಸ್ಥೆಯಾಗಿದೆ. ಇದಕ್ಕೆ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲವೆಂದು ಹೇಳಿದೆ.

ಪದ್ಮಾವತಿ ಸಿನಿಮಾವು ಡಿಸೆಂಬರ್ ಒಂದರಂದು ಬಿಡುಗಡೆಯಾಗಲು ಸಿದ್ಧಗೊಂಡಿದೆ. ಆದರೆ ಹಲವಾರು ಹಲವಾರು ಮಂದಿ ಚಿತ್ರದಲ್ಲಿ ಪದ್ಮಾವತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಹೇಳಿ ಪ್ರತಿಭಟಿಸಿದ್ದಾರೆ.