ಸಲ್ಮಾನ್ ಖಾನ್ ನ್ನು ಸೆಟ್ ನಿಂದಲೇ ಕರೆದೊಯ್ದ ಪೊಲೀಸರು

ಸಲ್ಮಾನ್ ಖಾನ್ ನ್ನು ಸೆಟ್ ನಿಂದಲೇ ಕರೆದೊಯ್ದ ಪೊಲೀಸರು

HSA   ¦    Jan 11, 2018 05:08:40 PM (IST)
ಸಲ್ಮಾನ್ ಖಾನ್ ನ್ನು ಸೆಟ್ ನಿಂದಲೇ ಕರೆದೊಯ್ದ ಪೊಲೀಸರು

ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ವ್ಯಕ್ತಿಯೊಬ್ಬ ಜೀವಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ರೇಸ್-3 ಸಿನೆಮಾದ ಚಿತ್ರೀಕರಣದ ಜಾಗದಿಂದ ಸಲ್ಮಾನ್ ಅವರನ್ನು ಬಿಗಿ ಭದ್ರತೆಯಲ್ಲಿ ಮನೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ಹೇಳಿವೆ.

ಲಾರೆನ್ಸ್ ಬಿಶೊನಾಯಿ ಎಂಬಾತ ಸಲ್ಮಾನ್ ಖಾಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜೋಧಪುರ ಕೋರ್ಟ್ ನಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಹಾಜರಾದ ಮರುದಿನವೇ ಈ ಬೆದರಿಕೆ ಬಂದಿದೆ. ವಿಶೇಷವೆಂದರೆ ಬಿಶೊನಾಯಿಯನ್ನು ಸಲ್ಮಾನ್ ಕೋರ್ಟ್ ಗೆ ಹಾಜರಾದ ದಿನವೇ ಬಿಗಿ ಭದ್ರತೆಯಲ್ಲಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.

ರೇಸ್ -3 ಚಿತ್ರೀಕರಣ ನಡೆಯುತ್ತಿರುವ ಚಿತ್ರದ ಸೆಟ್ ನೊಳಗೆ ಕೆಲವು ಅಪರಿಚಿತರು ನುಗ್ಗಿದ್ದಾರೆ ಎಂದು ಪೊಲೀಸರು ಬಂದು ಮಾಹಿತಿ ನೀಡಿ, ಸಲ್ಮಾನ್ ಖಾನ್ ಮತ್ತು ಚಿತ್ರದ ನಿರ್ಮಾಪಕ ರಮೇಶ್ ತುರಾನಿ ಅವರಿಗೆ ತಿಳಿಸಿದರು. ಬಳಿಕ ಸಲ್ಮಾನ್ ಖಾನ್ ಅವರನ್ನು ಬಿಗಿ ಭದ್ರತೆಯಲ್ಲಿ ಬಾಂದ್ರಾದಲ್ಲಿರುವ ಅವರ ಮನೆಗೆ ಕರೆದೊಯ್ಯಲಾಗಿದೆ.