‘ನನ್ನ ಹೆಸರು ಕಿಶೋರ ಏಳು ಪಾಸು 8’ಗೆ ಮುಹೂರ್ತ

‘ನನ್ನ ಹೆಸರು ಕಿಶೋರ ಏಳು ಪಾಸು 8’ಗೆ ಮುಹೂರ್ತ

LK   ¦    Apr 10, 2019 03:49:47 PM (IST)
‘ನನ್ನ ಹೆಸರು ಕಿಶೋರ ಏಳು ಪಾಸು 8’ಗೆ ಮುಹೂರ್ತ

ಮೈಸೂರು: ಪಾತಿ ಫಿಲಂಸ್ ರವರ ತೃತೀಯ ಚಿತ್ರ ‘ನನ್ನ ಹೆಸರು ಕಿಶೋರ ಏಳು ಪಾಸು 8’ ಚಿತ್ರದ ಮುಹೂರ್ತಕ್ಕೆ ನಗರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮೈಸೂರು ಮತ್ತು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು ಡಿ.ಟಿ.ಪ್ರಕಾಶ್ ಅವರು ಚಿತ್ರಕ್ಕೆ ಚಾಲನೆ ನೀಡಿದರು.

ತಾತ ಮತ್ತು ಮೊಮ್ಮಗನ ಬಾಂಧವ್ಯ ಬೆಸೆಯುವ ಚಿತ್ರ ಇದಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು ಎಂಬ ಸೂಪರ್ ಹಿಟ್ ಚಿತ್ರದ ನಂತರ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹೇಂದ್ರ ನಟಿಸಿರುವ ಚಿತ್ರ ಇದಾಗಲಿದೆ. ತಾತನ ಪಾತ್ರದಲ್ಲಿ ದತ್ತಣ್ಣ ನಟಿಸುತ್ತಿದ್ದು, ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಭಾರತಿ ಶಂಕರ್ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಸುದೀಪ ಶರ್ಮ, ಸಾಹಿತ್ಯ ಮತ್ತು ಸಂಗೀತ ಮಂಜು ಕವಿ ವಾದ್ಯ ಸಂಯೋಜನೆ ಛಾಯಾಗ್ರಹಣ ಲವಿತ್ ಸಂಕಲನ ಕೆಂಪರಾಜು ಬಿ ಎಸ್ ಪಿಆರ್ ಓ ಹರೀಶ್ ಸ್ಥಿರ ಚಿತ್ರಣ ಓಂ ಪ್ರಕಾಶ್ ಮತ್ತು ನಿರ್ಮಾಣ ನಿರ್ವಹಣೆ ವೇಣುಗೋಪಾಲ್, ಸಂಭಾಷಣೆ ಲೋಕೇಶ್ ಗೌಡ ಮಂಡ್ಯ ಇವರುಗಳ ನಿರ್ವಹಣೆ ಚಿತ್ರಕ್ಕಿದೆ.

ಮುಖ್ಯ ಭೂಮಿಕೆಯಲ್ಲಿ ತಬಲಾ ನಾಣಿ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪ್ರವರ್ತ ರಾಜು, ಮಂಡ್ಯ ಆನಂದ್ ಮುಂತಾದವರು ನಟಿಸಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕೇಳಲು ಬಹಳ ಇಂಪಾಗಿದೆ. ಮೈಸೂರಿನ ಸುತ್ತಮುತ್ತ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದು, ದಸರಾ ವೇಳೆ ಚಿತ್ರವನ್ನು ತೆರೆಯ ಮೇಲೆ ತರಲು ಬಹಳ ಉತ್ಸುಕರಾಗಿದ್ದೇವೆ ಎಂದು ಚಿತ್ರದ ನಿರ್ಮಾಪಕ ಎಂಡಿ.ಪಾರ್ಥಸಾರತಿ(ಪಾತಿ) ಯವರು ತಿಳಿಸಿದರು. ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ತೇಜಸ್ ಶಂಕರ್ ,ಹಾಗೂ ನೂರಾರು ಕಲಾವಿದರು ಹಾಜರಿದ್ದರು.

More Images