ಇನ್ನು ರಣವೀರ್ ಸಂಭಾವನೆ ಕೇವಲ 13 ಕೋಟಿ!

ಇನ್ನು ರಣವೀರ್ ಸಂಭಾವನೆ ಕೇವಲ 13 ಕೋಟಿ!

HSA   ¦    Feb 12, 2018 01:57:36 PM (IST)
ಇನ್ನು ರಣವೀರ್ ಸಂಭಾವನೆ ಕೇವಲ 13 ಕೋಟಿ!

ಮುಂಬಯಿ: ಪದ್ಮಾವತ್ ನಲ್ಲಿ ತನ್ನ ಪಾತ್ರದಿಂದ ಭಾರೀ ಪ್ರಶಂಸೆಗೆ ಒಳಗಾಗಿರುವಂತಹ ರಣವೀರ್ ಸಿಂಗ್ ತನ್ನ ಸಂಭಾವನೆಯಲ್ಲಿ ಭಾರೀ ಏರಿಕೆ ಮಾಡಿದ್ದಾರೆ.

ಪದ್ಮಾವತ್ ಚಿತ್ರದಲ್ಲಿನ ಖಿಲ್ಜಿ ಪಾತ್ರದಿಂದ ಪ್ರೇಕ್ಷಕರ ಮನಗೆದ್ದಿರುವಂತಹ ರಣವೀರ್ ಸಿಂಗ್ ತನ್ನ ಸಂಭಾವನೆಯನ್ನು 13 ಕೋಟಿಗೆ ಏರಿಕೆ ಮಾಡಿದ್ದಾರೆ. ಇದೀಗ ಬಾಲಿವುಡ್ ನ ಗರಿಷ್ಠ ಸಂಭಾವನೆ ಎನ್ನಲಾಗುತ್ತಿದೆ.

2010ರಲ್ಲಿ ಬ್ಯಾಂಡ್ ಬಾಜಾ ಬಾರಾತ್ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ ರಣವೀರ್ ಸಿಂಗ್ ಲುಟೇರಾ ಚಿತ್ರದ ಯಶಸ್ಸಿನ ಬಳಿಕವೂ ಒಂದೇ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ದೀಪಿಕಾ ಪಡುಕೋಣೆ ಜತೆಗಿನ ಪದ್ಮಾವತ್ ಚಿತ್ರವೂ ಭಾರೀ ಯಶಸ್ಸು ಪಡೆದ ಬಳಿಕ ರಣವೀರ್ ಸಿಂಗ್ ಸಂಭಾವನೆಯಲ್ಲಿ ಏರಿಕೆ ಮಾಡಿದ್ದಾರೆ.
ಬಾಕ್ಸ್ ಆಫೀಸ್ ನಲ್ಲಿ ಚಿತ್ರವೊಂದು ಯಶಸ್ಸು ಪಡೆದ ಬಳಿಕ ನಟ-ನಟಿಯರು ಸಂಭಾವನೆ ಹೆಚ್ಚು ಮಾಡುವರು. ದೀಪಿಕಾ ಕೂಡ ಯಶಸ್ಸಿನ ಬಳಿಕ ತನ್ನ ಸಂಭಾವನೆ ಹೆಚ್ಚಿಸಿಕೊಳ್ಳಬಹುದು ಎಂದು ಬಾಲಿವುಡ್ ನ ಮೂಲಗಳು ಹೇಳಿವೆ.