ಅತ್ಯಾಚಾರ ಪ್ರಕರಣ: ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮಧ್ಯಂತರ ತಡೆ

ಅತ್ಯಾಚಾರ ಪ್ರಕರಣ: ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮಧ್ಯಂತರ ತಡೆ

HSA   ¦    Jul 03, 2019 11:18:09 AM (IST)
ಅತ್ಯಾಚಾರ ಪ್ರಕರಣ: ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮಧ್ಯಂತರ ತಡೆ

ಮುಂಬಯಿ: ಅತ್ಯಾಚಾರ ಪ್ರಕರಣದಲ್ಲಿ ನಟ ಆದಿತ್ಯ ಪಂಚೋಲಿ ಬಂಧನಕ್ಕೆ ಮುಂಬಯಿಯ ಡಿಂಡೋಶಿ ಸೆಷನ್ ನ್ಯಾಯಾಲಯವು ಮಧ್ಯಂತರ ತಡೆ ನೀಡಿದೆ.

54ರ ಹರೆಯದ ಪಂಚೋಲಿ ಅವರ ವಿರುದ್ಧ ಮುಂಬಯಿ ಪೊಲೀಸರು ಕಳೆದ ತಿಂಗಳು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ತನ್ನನ್ನು ಬಂಧಿಸದಂತೆ ಪಂಚೋಲಿ ಕೋರ್ಟ್ ಮೆಟ್ಟಿಲೇರಿದ್ದರು.

ಜುಲೈ 19ರ ತನಕ ಪಂಚೋಲಿಯನ್ನು ಬಂಧಿಸಬಾರದು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಬಾಲಿವುಡ್ ನ ನಟಿಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ಪಂಚೋಲಿ ವಿರುದ್ಧ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.