ದಶರಥ ಚಿತ್ರದ 'ಓ ಜೀವ' ಲಿರಿಕಲ್ ವಿಡಿಯೋ ಹಾಡು ಬಿಡುಗಡೆ

ದಶರಥ ಚಿತ್ರದ 'ಓ ಜೀವ' ಲಿರಿಕಲ್ ವಿಡಿಯೋ ಹಾಡು ಬಿಡುಗಡೆ

YK   ¦    Mar 12, 2019 05:01:31 PM (IST)
ದಶರಥ ಚಿತ್ರದ 'ಓ ಜೀವ' ಲಿರಿಕಲ್ ವಿಡಿಯೋ ಹಾಡು ಬಿಡುಗಡೆ

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದಶರಥ ಚಿತ್ರದ 'ಓ ಜೀವ' ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದ್ದು ಇದರಲ್ಲಿ ರವಿಚಂದ್ರನ್ ಹಾಗೂ ಅಭಿರಾಮಿ ಅವರು ತುಂಬಾನೇ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಎ.ಎಂ. ರಮೇಶ್ ನಿರ್ದೇಶನ ಮಾಡಿದ್ದು, ರಾಮಾಯಣದ ಆಧುನಿಕ ಕತೆ ಇದಾಗಿರುವುದರಿಂದ ಚಿತ್ರಕ್ಕೆ ದಶರಥ ಎಂದು ಹೆಸರಿಡಲಾಗಿದೆ ಎಂದು ನಿರ್ದೇಶಕರು ಹೇಳಿದ್ದರು. ಇನ್ನೂ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ.

ರವಿಚಂದ್ರನ್ ಅವರಿಗೆ ನಾಯಕಿಯಾಗಿ ಸೋನಿಯಾ ಅಗರ್ವಾಲ್ ಅವರು ಬಣ್ಣಹಚ್ಚಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಅವಿನಾಶ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಒಳಗೊಂಡಿದೆ.

More Images