ಜೂ.22ರಿಂದ ಕನ್ನಡದ ಕೋಟ್ಯಾಧಿಪತಿ ಪ್ರಸಾರ

ಜೂ.22ರಿಂದ ಕನ್ನಡದ ಕೋಟ್ಯಾಧಿಪತಿ ಪ್ರಸಾರ

YK   ¦    Jun 18, 2019 03:36:45 PM (IST)
ಜೂ.22ರಿಂದ ಕನ್ನಡದ ಕೋಟ್ಯಾಧಿಪತಿ ಪ್ರಸಾರ

ಬೆಂಗಳೂರು: ಜೂನ್ 22ರಿಂದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಳಿದೆ.

ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಈ ಬಾರಿ ವೀಕ್ಷಕರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಇದ್ದು, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆಡಿಷನ್ ನಡೆದಿದೆ.