ನನ್ನ ಮೇಲೆ ಆ್ಯಸಿಡ್ ದಾಳಿಗೆ ಯತ್ನ: ಜಯಪ್ರದಾ

ನನ್ನ ಮೇಲೆ ಆ್ಯಸಿಡ್ ದಾಳಿಗೆ ಯತ್ನ: ಜಯಪ್ರದಾ

YK   ¦    Feb 02, 2019 04:29:16 PM (IST)
ನನ್ನ ಮೇಲೆ ಆ್ಯಸಿಡ್ ದಾಳಿಗೆ ಯತ್ನ: ಜಯಪ್ರದಾ

ಮುಂಬೈ: ನನ್ನ ಮೇಲೆ ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ಅವರು ಆ್ಯಸಿಡ್ ದಾಳಿ ನಡೆಸಲು ಯತ್ನಿಸಿದ್ದರು ಎಂದು ನಟಿ, ರಾಜಕಾರಣಿ ಜಯಪ್ರದಾ ಅವರು ಆರೋಪ ಮಾಡಿದ್ದಾರೆ.

ಕ್ವೀನ್ಸ್ ಲೈನ್ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾನು ಅಝಂ ಖಾನ್ ಜತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾರಣ ಅವರು ನನ್ನ ಮೇಲೆ ಆ್ಯಸಿಡ್ ದಾಳಿಗೆ ಯತ್ನಿಸಿದ್ದರು.

ಇದರಿಂದ ಹೊರಗಡೆ ಹೋದವಳು ಜೀವಂತವಾಗಿ ಮನೆಗೆ ವಾಪಾಸ್ ಬರುತ್ತೇನೆ ಎಂದು ಹೇಳಿಕೊಳ್ಳಲು ಆಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.