ಚಂಬಲ್ ನಲ್ಲಿ ಚಮ್ಮಕ್ ಕೊಡಲಿದ್ದಾರೆ ಸೋನು ಗೌಡ

ಚಂಬಲ್ ನಲ್ಲಿ ಚಮ್ಮಕ್ ಕೊಡಲಿದ್ದಾರೆ ಸೋನು ಗೌಡ

Rajath Shetty   ¦    Feb 21, 2019 03:15:09 PM (IST)
ಚಂಬಲ್ ನಲ್ಲಿ ಚಮ್ಮಕ್ ಕೊಡಲಿದ್ದಾರೆ ಸೋನು ಗೌಡ

ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಫೆಬ್ರವರಿ 22ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸಿರೋದು ಸೋನು ಗೌಡ.ಇದುವರೆಗೂ ವಿಶಿಷ್ಟವಾದ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿರೋ ಸೋನುಗೆ ಚಂಬಲ್‍ನಲ್ಲಿಯೂ ಅಂಥಾದ್ದೇ ಪಾತ್ರ ಸಿಕ್ಕಿದೆ. ಆದ್ರೆ ಅದು ಯಾವ ಥರದ್ದು, ಅದಕ್ಕೂ ಬೆಚ್ಚಿ ಬೀಳಿಸೋ, ಬೆರಗಾಗಿಸೋ ಶೇಡುಗಳಿವೆಯಾ? ಎಂಬೆಲ್ಲ ವಿಚಾರಗಳನ್ನು ಗುಟ್ಟಾಗಿಯೇ ಇಡಲಾಗಿದೆ.

ಆದರೆ ಸೋನು ಅವತಾರವಿಲ್ಲಿ ಸಂಪೂರ್ಣ ಬದಲಾಗಿದೆ ಅನ್ನೋ ವಿಚಾರ ಪಕ್ಕಾ.ಚಿತ್ರತಂಡವೇ ಹೊರ ಬಿಟ್ಟಿರೋ ಒಂದಷ್ಟು ಮಾಹಿತಿಯ ಪ್ರಕಾರ ಸೋನು ಪಾತ್ರವೂ ಚಂಬಲ್ ವಿಶೇಷತೆಗಳಲ್ಲಿ ಒಂದಾಗಿದೆ. ಸಣ್ಣದೊಂದು ಪಾತ್ರವನ್ನೂ ಕಾಡುವಂತೆ ರೂಪಿಸುವ ನಿರ್ದೇಶಕರು ಸೋನು ಪಾತ್ರವನ್ನು ಅದರಂತೆಯೇ ರೂಪಿಸಿದ್ದಾರಂತೆ. ಈ ಮೂಲಕವೇ ಸೋನು ಸಿನಿ ಕೆರಿಯರ್ ಮತ್ತಷ್ಟು ಪ್ರಜ್ವಲಿಸೋ ವಾತಾವರಣವಿದೆ.

ಈ ಸಿನಿಮಾಗೆ ಜ್ಯೂಡಾ ಸಾಂಡಿ ಸಂಗೀತ ನಿರ್ದೇಶನ ಮಾಡಿದ್ರೆ ಜಯಂತ ಕಾಯ್ಕಿಣಿ, ಸಿಂಪಲ್ ಸುನಿ ಸಾಹಿತ್ಯ ಬರೆದಿದ್ದಾರೆ. ಜಂಬೆ, ಅಚ್ಯುತ ಕುಮಾರ್, ಕಿಶೋರ್, ರೋಜರ್ ನಾರಾಯಣ್, ಪವನ್ ಕುಮಾರ್, ಸರ್ದಾರ್ ಸತ್ಯ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಎಲ್ಲರ ಕುತೂಹಲಕ್ಕೆ ಎಡೆ ಮಾಡಿಕೊಟ್ಟ ಚಿತ್ರ ಇದೆ 22 ರಂದು ತೆರೆ ಮೇಲೆ ಬರಲಿದೆ.