ಬರ್ತ್ ಡೇ ಗರ್ಲ್ ಮಾನ್ವಿತಾಗೆ ಸಿಕ್ಕ ಭರ್ಜರಿ ಉಡುಗೊರೆ

ಬರ್ತ್ ಡೇ ಗರ್ಲ್ ಮಾನ್ವಿತಾಗೆ ಸಿಕ್ಕ ಭರ್ಜರಿ ಉಡುಗೊರೆ

SRJ   ¦    Apr 14, 2018 05:04:16 PM (IST)
ಬರ್ತ್ ಡೇ ಗರ್ಲ್ ಮಾನ್ವಿತಾಗೆ ಸಿಕ್ಕ ಭರ್ಜರಿ ಉಡುಗೊರೆ

'ಸ್ಯಾಂಡಲ್ ವುಡ್ ನ 'ಕೆಂಡಸಂಪಿಗೆ' ಅಂತಲೇ ಖ್ಯಾತಿ ಗಳಿಸಿರುವ ಮಾನ್ವಿತಾ ಹರೀಶ್ ಅವರಿಗೆ ಇಂದು (ಎಪ್ರಿಲ್ 14) ಹುಟ್ಟುಹಬ್ಬದ ಸಂಭ್ರಮ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಒಳ್ಳೊಳ್ಳೆ ಪಾತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿರುವ ನಟಿ ಮಾನ್ವಿತಾ ಹರೀಶ್ ಅವರಿಗೆ ಮತ್ತೊಂದು ಒಂದೊಳ್ಳೆ ಅವಕಾಶ ದೊರೆತಿದೆ.

ಮಾನ್ವಿತಾ ಹರೀಶ್ ಅವರ ಹುಟ್ಟುಹಬ್ಬದ ನೆಪದಲ್ಲಿ ನಿರ್ದೇಶಕ ನವೀನ್ ರೆಡ್ಡಿ ಅವರು 'ಸತ್ಯ'ವೊಂದನ್ನು ಬಹಿರಂಗ ಮಾಡಿದ್ದಾರೆ. ಯಾವ ಸತ್ಯ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳೋಕೆ ಹೋಗ್ಬೇಡಿ. ಯಾಕಂದ್ರೆ ನಿರ್ದೇಶಕ ನವೀನ್ ರೆಡ್ಡಿ ರಿವಿಲ್ ಮಾಡಿರೋದು 'ರಿಲ್ಯಾಕ್ಸ್ ಸತ್ಯ' ಅನ್ನೋದ ಹೊಸ ಸಿನಿಮಾದ ಪೋಸ್ಟರ್.

'ರಿಲ್ಯಾಕ್ಸ್ ಸತ್ಯ' ಚಿತ್ರದ ಹೊಚ್ಚ ಹೊಸ ಪೋಸ್ಟರ್ ನಲ್ಲಿ ಮಾನ್ವಿತಾ ಅವರ ಲುಕ್ ಬಹಳ ಡಿಫರೆಂಟ್ ಆಗಿದ್ದು, ಈ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ಮಿಂಚಲಿದ್ದಾರೆ ಅನ್ನೋ ಸಣ್ಣ ಸುಳಿವನ್ನ ಈ ಪೋಸ್ಟರ್ ನೀಡುತ್ತಿದೆ.

'ಅಕಿರಾ' ಸಿನಿಮಾ ಖ್ಯಾತಿಯ ನಿರ್ದೇಶಕ ನವೀನ್ ರೆಡ್ಡಿ 'ಸತ್ಯ ರಿಲ್ಯಾಕ್ಸ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಆರೆಂಜ್ ಪಿಕ್ಸೆಲ್ಸ್ ನಿರ್ಮಾಣ ಮಾಡುತ್ತಿದೆ. ಪ್ರಭು ಮುಂಡ್ಕೂರ್ ನಾಯಕ ನಟನಾಗಿ ಮಾನ್ವಿತಾ ಹರೀಶ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ವಿಭಿನ್ನವಾಗಿ ಮಿಂಚಿದ ಮೇಲೆ ಮಾನ್ವಿತಾ ಹರೀಶ್ ಅವರ ಸ್ಟಾರ್ ವ್ಯಾಲ್ಯೂ ಇನ್ನೂ ಹೆಚ್ಚಾಗಿದ್ದು, ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಮಾನ್ವಿತಾ ನಟನೆಯನ್ನು ಕೊಂಡಾಡಿದ್ದಾರೆ.