ಜೂ.28ರಂದು ಶಿವಣ್ಣ ಅಭಿನಯದ ರುಸ್ತುಂ ಚಿತ್ರ ಬಿಡುಗಡೆ

ಜೂ.28ರಂದು ಶಿವಣ್ಣ ಅಭಿನಯದ ರುಸ್ತುಂ ಚಿತ್ರ ಬಿಡುಗಡೆ

YK   ¦    Jun 18, 2019 05:05:53 PM (IST)
ಜೂ.28ರಂದು ಶಿವಣ್ಣ ಅಭಿನಯದ ರುಸ್ತುಂ ಚಿತ್ರ ಬಿಡುಗಡೆ

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರ ಜೂನ್ 28ರಂದು ಬಿಡುಗಡೆಗೊಳ್ಳಲಿದೆ.

ಈ ವಿಚಾರವನ್ನು ಶಿವರಾಜ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ರುಸ್ತುಂ ಚಿತ್ರ ಬಿಡುಗಡೆ ನಂತರ ಚಿಕಿತ್ಸೆಗಾಗಿ ಶಿವಣ್ಣ ಲಂಡನ್ ತೆರಳಿದ್ದಾರೆ. ಈ ವಿಚಾರವನ್ನು ಕೆಲ ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗೆ ತಿಳಿಸಿ ಈ ಬಾರಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ರುಸ್ತುಂನಲ್ಲಿ ಶಿವಣ್ಣಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅವರು ಅಭಿನಯಿಸಿದ್ದಾರೆ. ವಿಶೇಷವಾಗಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಅವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಸ ನಿರ್ದೇಶಕ ಕೆ.ರವಿ ಕುಮಾರ್ ಅವರು ರುಸ್ತುಂ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಟಿ ಮಯೂರಿ ಹಾಗೂ ರಚಿತಾ ರಾಮ್ ಅವರು ಚಿತ್ರದಲ್ಲಿದ್ದಾರೆ.