ಮಳೆಗೆ ತತ್ತರಿಸಿದವರ ನೆರವಿಗೆ ಸಹಕರಿಸಲು ದಚ್ಚು-ಕಿಚ್ಚ ಮನವಿ

ಮಳೆಗೆ ತತ್ತರಿಸಿದವರ ನೆರವಿಗೆ ಸಹಕರಿಸಲು ದಚ್ಚು-ಕಿಚ್ಚ ಮನವಿ

YK   ¦    Aug 18, 2018 11:49:09 AM (IST)
ಮಳೆಗೆ ತತ್ತರಿಸಿದವರ ನೆರವಿಗೆ ಸಹಕರಿಸಲು ದಚ್ಚು-ಕಿಚ್ಚ ಮನವಿ

ಬೆಂಗಳೂರು:  ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದ ಕೊಡಗಿನ ಜನತೆಯ ನೆರವಿಗೆ ಸಹಾಯ ಮಾಡಿ ಎಂದು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ತನ್ನ ಅಭಿಮಾನಿಗಳ ಬಳಿ ಹಾಗೂ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಅನೇಕ ಸಂಘ ಸಂಸ್ಥೆಗಳ ಜನರ ನೆರವಿಗೆ ಧಾವಿಸಿದ್ದು ಸ್ಟಾರ್ ನಟರು ಕೈ ಜೋಡಿಸಿದ್ದಾರೆ.

ಟ್ವಿಟರ್ ನಲ್ಲಿ ಡಿ ಬಾಸ್ ದರ್ಶನ್ 'ನನ್ನ ಪ್ರಾರ್ಥನೆ ಹಾಗೂ ಬೆಂಬಲ ಕೊಡಗಿನ ಜನತೆಯೊಂದಿಗಿದೆ. ಜನತೆ ಸಾಧ್ಯವಾದಷ್ಟು ಕೊಡಗಿನ ಜನತೆಗೆ ನೆರವಾಗಿ' ಎಂದು ಟ್ವೀಟ್ ಮಾಡಿ ಬೆಂಗಳೂರು ಮತ್ತು ಗೋಣಿಕೊಪ್ಪಲ್ ಪ್ರದೇಶದಲ್ಲಿರುಬ ಸಹಾಯ ಕೇಂದ್ರಗಳ ವಿಳಾಸವನ್ನು ಹಂಚಿಕೊಂಡು ಮನವಿ ಮಾಡಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಟ್ವೀಟ್ ನಲ್ಲಿ ''ನನ್ನ ಎಲ್ಲ ಅಭಿಮಾನಿ ಸಂಘಟನೆಗಳಿಗೂ ನನ್ನದೊಂದು ಮನವಿ. ಕರ್ನಾಟಕದಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಎಷ್ಟೋ ಸಾಧ್ಯವೋ ಅಷ್ಟು ನೆರವನ್ನು ಮಾಡಿ. ಇದು ನನಗೆ ನೀಡುವ ದೊಡ್ಡ ಗಿಫ್ಟ್. ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಸರ್ಕಾರ ಕೂಡ ಈ ಬಗ್ಗೆ ಗಮನಿಸಿ ನೆರವು ನೀಡಿ'' ಎಂದು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
ಈ ಮೂಲಕ ಸ್ಟಾರ್ ನಟರು ಮತ್ತೇ ಜನತೆಯ ಬಗ್ಗೆ ಕಾಳಜಿಯನ್ನು ಮರೆದಿದ್ದಾರೆ.

More Images