ಬಾಲಿವುಡ್ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ

ಬಾಲಿವುಡ್ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ

YK   ¦    May 26, 2018 06:31:54 PM (IST)
ಬಾಲಿವುಡ್ ಹಿರಿಯ ನಟಿ ಗೀತಾ ಕಪೂರ್ ಇನ್ನಿಲ್ಲ

ಮುಂಬೈ: ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಜನಪ್ರಿಯ ಗಳಿಸಿದ ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಅವರು ಶನಿವಾರ ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಕಪೂರ್ ಅವರನ್ನು ಮುಂಬೈನ ಎಸ್ಆರ್ವಿ ಆಸ್ಪತ್ರೆಯಲ್ಲಿ ಕೊನೆಯೂಸಿರೆಳೆದಿದ್ದಾರೆ ಎಂದು ನಿರ್ಮಾಪಕ ಅಶೋಕ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.

58 ವರ್ಷದ ಗೀತಾ ಅವರನ್ನು ಆಕೆಯ ಪುತ್ರ ರಾಜಾ ಕಪೂರ್ ಎಸ್ಆರ್ವಿ ಆಸ್ಪತ್ರೆಗೆ ದಾಖಲಿಸಿ ಹಣ ತೆರಳಿದವನು ನಂತರ ಪತ್ತೆಯಾಗಿಲ್ಲ. ಆ ಬಳಿಕ ನಿರ್ಮಾಪಕ ಅಶೋಕ್ ಪಂಡಿತ್ ಅವರು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರು.