ರಂಗಭೂಮಿಯನ್ನು ತನ್ನ ಹೆಸರಿಗೆ ಕೂಡಿಸಿಕೊಂಡ "ಗಿಣಿ ಹೇಳಿದ ಕಥೆ" ಯ ನಾಯಕ

ರಂಗಭೂಮಿಯನ್ನು ತನ್ನ ಹೆಸರಿಗೆ ಕೂಡಿಸಿಕೊಂಡ "ಗಿಣಿ ಹೇಳಿದ ಕಥೆ" ಯ ನಾಯಕ

Rajath Shetty   ¦    Jan 09, 2019 11:45:26 AM (IST)
ರಂಗಭೂಮಿಯನ್ನು ತನ್ನ ಹೆಸರಿಗೆ ಕೂಡಿಸಿಕೊಂಡ "ಗಿಣಿ ಹೇಳಿದ ಕಥೆ" ಯ ನಾಯಕ

ರಂಗಭೂಮಿಯನ್ನು ತಮ್ಮ ಜೀವನ ಎಂದುಕೊಂಡವರು ಕೆಲವರಾದರೆ, ರಂಗಭೂಮಿಯನ್ನು ತನ್ನ ಹೆಸರಿಗೆ ಕೂಡಿಸಿಕೊಂಡಿದ್ದಾರೆ ದೇವ್ ರಂಗಭೂಮಿ. ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವವಿರುವ ದೇವ್ ಗೆ ರಂಗಭೂಮಿಯ ಬಗ್ಗೆ ಇರುವ ಗೌರವವನ್ನು ನಾವು ಕಾಣಬಹುದು.

ಬರೋಬ್ಬರಿ ನಾಲ್ಕು ವರುಷಗಳಿಂದ "ಗಿಣಿ ಹೇಳಿದ ಕಥೆ" ಯ ಸ್ಕ್ರೀಪ್ಟ್ ಕೆಲಸ ಮಾಡಿ ಮುಗಿಸಿದ ದೇವ್ ಅವರ ತಾಳ್ಮೆಯನ್ನು ನಾವು ಶ್ಲಾಘಿಸಲೇಬೇಕು. ಚಿತ್ರದಲ್ಲಿ ಬಹುತೇಕ ಮಂದಿ ರಂಗಭೂಮಿಯ ಅನುಭವ ಉಳ್ಳವರು. ದೇವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರೋ ಚಿತ್ರ ಗಿಣಿ ಹೇಳಿದ ಕಥೆ. ನಾಗರಾಜ್ ಉಪ್ಪುಂದ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗ್ಲೇ ಟೀಸರ್, ಹಾಡುಗಳ ಮೂಲಕ ಗಿಣಿಯ ಹವಾ ಪ್ರೇಕ್ಷಕ ವಲಯದಲ್ಲಿ ಜೋರಾಗಿದೆ. ಎಲ್ಲರೂ ಕಥೆ ಹೇಳಲು ಬಂದ ಗಿಣಿಯತ್ತ ಕುತೂಹಲದ ಕಣ್ಣು ನೆಟ್ಟಿದ್ದಾರೆ. ಅಷ್ಟಕ್ಕೂ ಈ ಗಿಣಿ ಯಾವ ಥರದ ಕಥೆ ಹೇಳಲಿದೆ ಎಂಬುದು ಎಲ್ಲರ ಕೌತುಕದ ಮೂಲ.

ಗಿಣಿ ಹೇಳಿದ ಕಥೆಯ ಹಾಡುಗಳ ಅಲೆ! ಹಾಡುಗಳು ಗೆದ್ದರೆ ಚಿತ್ರವೂ ಗೆಲ್ಲುತ್ತೆ ಅನ್ನೋದು ಚಿತ್ರರಂಗದಲ್ಲಿರೋ ನಂಬಿಕೆ. ಅದಕ್ಕೆ ಸಾಲು ಸಾಲಾಗಿ ಉದಾಹರಣೆಗಳೂ ಇದ್ದಾವೆ. ಆ ಸೂತ್ರದಲ್ಲಿ ನೋಡೋದಾದ್ರೆ ಗಿಣಿ ಹೇಳಿದ ಕಥೆ ಚಿತ್ರದ ಗೆಲುವೂ ಕೂಡಾ ಸ್ಪಷ್ಟವಾಗಿದೆ. ಯಾಕಂದ್ರೆ ಈಗಾಗ್ಲೇ ಈ ಸಿನಿಮಾ ಹಾಡುಗಳಲ್ಲಿ ಅನೇಕವು ಟ್ರೆಂಡ್ ಸೆಟ್ ಮಾಡಿವೆ. ರಂಗಭೂಮಿಯಲ್ಲಿ ಇದ್ದುಕೊಂಡು ಕಥೆ ಬರೆಯಲು ಶುರು ಮಾಡಿದ ದೇವ್ ಗೆ "ಗಿಣಿ ಹೇಳಿದ ಕಥೆ" ಅವರ ಕನಸಾಗಿತ್ತು. ಹಿತನ್ ಹಾಸನ್ ಸಂಗೀತ ನೀಡಿರೋ ಈ ಚಿತ್ರದ ಧ್ವನಿಸುರುಳಿ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು.

ಇದರಲ್ಲಿ ಕೆಲ ಹಾಡುಗಳು ದಿನದೊಪ್ಪತ್ತಿನಲ್ಲೇ ಜನಪ್ರಿಯಗೊಂಡಿದ್ವು. ಮತ್ತೆ ಕೆಲ ಹಾಡುಗಳು ನಿಧಾನಕ್ಕೆ ಟ್ರೆಂಡ್ ಸೆಟ್ ಮಾಡ್ತಿವೆ. ಅದ್ರಲ್ಲಿ ರಾಜನೇಸರ ಅವರು ಬರೆದಿರೋ ಅಲೆ ಅಲೆ ನಿನ್ನದೇ ಧ್ಯಾನ ಹಾಡೂ ಸೇರಿಕೊಂಡಿದೆ. ಪ್ರೀತಿಯ ಸೂಕ್ಷ್ಮ ಭಾವಗಳನ್ನ ಬಿಚ್ಚಿಡೋ ಈ ಹಾಡು ಯುವ ಮಿಡಿತದ ರೂವಾರಿಯಂತಿದೆ. ಇತ್ತೀಚೆಗಷ್ಟೇ ಯೂಟ್ಯೂಬಿನಲ್ಲಿಯೂ ಬಿಡುಗಡೆಯಾಗಿರೋ ಈ ಹಾಡಿಗೆ ಅಪಾರ ಮೆಚ್ಚುಗೆಗಳೂ ಕೇಳಿ ಬರ್‍ತಿವೆ. ಹೊಸಬರ ಈ ಪ್ರಯತ್ನ ಯಶಸ್ಸು ಸಿಗುತ್ತಾ ಅಂತ ಕಾಯಬೇಕಾಗಿದೆ. ಇದೆ ಶುಕ್ರವಾರ ಚಿತ್ರ ತೆರೆ ಕಾಣಲಿದ್ದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನೋಡಬಹುದು.

More Images