ಅಭಿಮಾನಿಯ ಗೃಹಪ್ರವೇಶಕ್ಕೆ ಆಗಮಿಸಿದ ನಟ ಯಶ್

ಅಭಿಮಾನಿಯ ಗೃಹಪ್ರವೇಶಕ್ಕೆ ಆಗಮಿಸಿದ ನಟ ಯಶ್

LK   ¦    May 16, 2019 06:00:39 PM (IST)
ಅಭಿಮಾನಿಯ ಗೃಹಪ್ರವೇಶಕ್ಕೆ ಆಗಮಿಸಿದ ನಟ ಯಶ್

ಮದ್ದೂರು: ಕೆರೆಮೇಗಲದೊಡ್ಡಿ ಗ್ರಾಮದ ಯಶ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಪ್ರಸಾದ್ ಅವರ ಗೃಹ ಪ್ರವೇಶಕ್ಕೆ ತೆರಳುತ್ತಿದ್ದ ಚಿತ್ರನಟ ಯಶ್ ಅವರನ್ನು ಅಭಿಮಾನಿಗಳು ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್‍ನಲ್ಲಿ ಭವ್ಯ ಸ್ವಾಗತ ನೀಡುವ ಮೂಲಕ ಬರಮಾಡಿಕೊಂಡರು.

ಈ ವೇಳೆ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಟ ಯಶ್ ಚುನಾವಣೆಯಲ್ಲಿ ಜನರು ಜನಪ್ರತಿನಿಧಿಗಳನ್ನು ಗೆಲ್ಲಿಸಿದ ಮೇಲೆ ಜನರ ಕೆಲಸ ಮಾಡಬೇಕು, ಇದು ಜನಸೇವೆ, ದಾನ ಅಥವಾ ದೊಡ್ಡಸ್ತಿಕೆ ಅನಿಸಿಕೊಳ್ಳುವುದಿಲ್ಲ. ಇದು ಅವರ ಕರ್ತವ್ಯ ಅಂದಕೊಂಡು ಜನಪರ ಕೆಲಸಗಳನ್ನುಮಾಡಬೇಕು ಎಂದರು.

ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯ ಬಗೆ ಅವರದೇ ಆದ ಆಲೋಚನೆಯಿದ್ದು ಗೆದ್ದ ನಂತರ ಅದನ್ನು ಈಡೇರಿಸಲಿದ್ದಾರೆ. ನಾನು ಮತ್ತು ದರ್ಶನ್ ಚುನಾವಣೆ ನಂತರವೂ ಜನರ ಜತೆಯಲ್ಲೇ ಇರುತ್ತೇವೆ. ಚುನಾವಣೆ ಬೇರೆ ಜನರ ವಿಶ್ವಾಸವೇ ಬೇರೆಯಾಗಿದ್ದು, ಜಿಲ್ಲೆಯ ಜನರ ಜೊತೆ ಸದಾ ಇರುವುದಾಗಿ ತಿಳಿಸಿದರು.

ಚುನಾವಣೆಯಲ್ಲಿ ನಮಗೆ ಗೆಲ್ಲುವ ಭರವಸೆ ಇದ್ದು, ಈ ಬಗ್ಗೆ ಏನನ್ನು ಹೇಳುವುದಿಲ್ಲ ಎಂದರು.

ಸುಮಲತಾ ಅವರು ಅಧಿಕ ಮತಗಳಿಂದ ಗೆಲ್ಲುವುದಾಗಿ ಈಗಲೇ ತಿಳಿಸಿದರೆ ಕೊಚ್ಚಿಕೊಂಡಂತಾಗುತ್ತದೆ. ಈ ಬಗ್ಗೆ ಮಾತನಾಡಿದರೆ ತಾವು ತೂಕ ಕಳೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಕೇಕ್ ಕತ್ತರಿಸಿದ ಯಶ್

ಶಿವಪುರಕ್ಕೆ ಆಗಮಿಸಿ ನಟ ಯಶ್ ಅಭಿಮಾನಿಗಳಾದ ಅಯ್ಯಂಗಾರ್ ಬೇಕರಿ ಮಾಲೀಕರಾದ ರಾಧಿಕಾಹಾಲಪ್ಪ ದಂಪತಿ ಮಗಳಾದ ಲಹರಿ ಅವರ 3ನೇ ವರ್ಷದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡರು. ಅಲ್ಲದೆ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ ಮಗುವಿಗೆ ಯಶ್ ಕೇಕ್ ತಿನ್ನಿಸಿ ಶುಭಹಾರೈಸಿದರು.

ಈ ವೇಳೆ ಮುಖಂಡರಾದ ಇಂಡುವಾಳು ಸಚ್ಚಿದಾನಂದ್, ಎಂ.ಪಿ.ಅಮರ್ ಬಾಬು, ಹೊಟ್ಟೆಗೌಡನದೊಡ್ಡಿ ನಾಗೇಶ್, ರಾಘು, ಸಚಿನ್, ನಂದಿಶ್, ಮಹೇಂದ್ರ ಸೇರಿದಂತೆ ಹಲವರು ಹಾಜರಿದ್ದರು.

ಸುಮಲತಾ ಚುನಾವಣೆಯಲ್ಲಿ ಗೆಲ್ತಾರೆ
ಕೆರೆಮೇಗಲದೊಡ್ಡಿಯಲ್ಲಿ ಅಭಿಮಾನಿಯ ನೂತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಟ ಯಶ್ ಅವರು, ಲೋಕಸಭಾ ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಮಂಡ್ಯಕ್ಕೆ ಬಂದಿದ್ದೆ. ಮೊದಲ ಸಾರಿ ಏನೂ ಬಂದಿಲ್ಲ. ಚುನಾವಣೆ ಮುಗಿದ ಬಳಿಕ ಸುಮಲತಾರನ್ನು ಭೇಟಿ ಮಾಡಿದ್ದೆ. ಸುಮಲತಾ ಚುನಾವಣೆಯಲ್ಲಿ ಗೆಲ್ತಾರೆ.

ಒಳ್ಳೆಯ ವಾತಾವರಣವಿದೆ. ಈಗಲೇ ಗೆಲುವಿನ ಅಂತರ ಹೇಳಿದ್ರೆ ಕೊಚ್ಚಿಕೊಂಡತಾಗುತ್ತೆ ಎಂದು ಹೇಳಿದರು. ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣ್ತಿಲ್ಲ ಎಂಬ ಬಗ್ಗೆ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಚಾರಕ್ಕೆ ಬಂದ್ವಿ ಹೋದ್ವಿ. ಅಭ್ಯರ್ಥಿ ಬಂದಿದ್ದಾರಲ್ಲ. ನಾನು ಮಂಡ್ಯ ರಾಜಕಾರಣಕ್ಕೆ ಬರಲ್ಲ. ಸ್ಪರ್ಧೆ ಕೂಡ ಮಾಡಲ್ಲ ಸುಮಲತಾ ಗೆದ್ದರೆ ಒಳ್ಳೆಯ ಕೆಲ್ಸ ಮಾಡ್ತಾರೆ ಎಂದರು.