ಜ.9 ರಂದು 'ಪಚ್ಚೆಹಾದಿ' ಕೃತಿ ಬಿಡುಗಡೆ

ಜ.9 ರಂದು 'ಪಚ್ಚೆಹಾದಿ' ಕೃತಿ ಬಿಡುಗಡೆ

Jan 08, 2017 12:28:29 PM (IST)

ಕಾರ್ಕಳ: ಹೊಸಸಂಜೆ ಪ್ರಕಾಶನದ ಎಂಟನೇ ಕೃತಿ, ಪತ್ರಕರ್ತ ಶಶಿಧರ ಬೆಳ್ಳಾಯರು ಬರೆದಿರುವ ಚಾರಣ ಸಂಬಂಧಿ ಲೇಖನಮಾಲೆ 'ಪಚ್ಚೆಹಾದಿ' ಜ.9, ಸೋಮವಾರದಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನ ಮುಂಭಾಗದ ಗಾಂಧಿ ಪಾರ್ಕ್ ನಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. 'ಜಯಕಿರಣ' ಮಾಲಕ, ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಪದ್ಮಾಕರ ಭಟ್ ಶುಭಾಶಂಸನೆಗೈಯಲಿದ್ದಾರೆ. ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡಕಟ್ಟೆ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಾಶಕ ಆರ್.ದೇವರಾಯ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.