ಗಾಯಕ ಹಿಮೇಶ್ ರೇಶಮಿಯಾ ಕಾರು ಅಪಘಾತ: ಚಾಲಕ ಗಂಭೀರ

ಗಾಯಕ ಹಿಮೇಶ್ ರೇಶಮಿಯಾ ಕಾರು ಅಪಘಾತ: ಚಾಲಕ ಗಂಭೀರ

HSA   ¦    Jul 02, 2019 04:34:21 PM (IST)
ಗಾಯಕ ಹಿಮೇಶ್ ರೇಶಮಿಯಾ ಕಾರು ಅಪಘಾತ: ಚಾಲಕ ಗಂಭೀರ

ಮುಂಬಯಿ: ಖ್ಯಾತ ಗಾಯಕ ಹಿಮೇಶ್ ರೇಶಮಿಯಾ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವರು.

ಅಪಘಾತದಲ್ಲಿ ಹಿಮೇಶ್ ರೇಶಮಿಯಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿರುವ ಅಪಘಾತದಲ್ಲಿ ಬಿಹಾರ ಮೂಲದ ಚಾಲಕ ರಾಮ್ ರಂಜನ್ ದಾಸ್ ಅವರ ಸ್ಥಿತಿ ಚಿಂತಾಜನಕವಾಗಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಝಲಕ್ ದಿಕ್ ಲಾಜಾ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಹಿಮೇಶ್ ರೇಶಮಿಯಾ ಇದರ ಬಳಿಕ ಕೆಲವು ಸಿನಿಮಾ ನಿರ್ದೇಶಿಸಿದ್ದರು ಮತ್ತು ನಾಯಕನಾಗಿಯೂ ಅವರು ನಟಿಸಿದ್ದರು.