ನಟಿ ಜಯಂತಿಗೆ 'ಡಾ.ರಾಜ್ ಕುಮಾರ್ ಸಂಸ್ಕೃತಿ' ಪ್ರಶಸ್ತಿ

ನಟಿ ಜಯಂತಿಗೆ 'ಡಾ.ರಾಜ್ ಕುಮಾರ್ ಸಂಸ್ಕೃತಿ' ಪ್ರಶಸ್ತಿ

YK   ¦    Mar 16, 2019 11:26:16 AM (IST)
ನಟಿ ಜಯಂತಿಗೆ 'ಡಾ.ರಾಜ್ ಕುಮಾರ್ ಸಂಸ್ಕೃತಿ' ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನೀಡುವ 2019ನೇ ಸಾಲಿನ 'ಡಾ.ರಾಜ್ ಕುಮಾರ್ ಸಂಸ್ಕೃತಿ ಪ್ರಶಸ್ತಿಗೆ ಹಿರಿಯ ನಟಿ.ಡಾ.ಜಯಂತಿ ಅವರನ್ನು ಆಯ್ಕೆಯಾಗಿದ್ದಾರೆ.

ಶುಕ್ರವಾರ ಕಸಾಪ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 30 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ಸಿನಿಮಾ ಕ್ಷೇತ್ರದ ಸಾಧಕರಿಗೆ ಹಾಗೂ ಸಾಹಿತಿಗಳಿಗೆ ನೀಡಲಾಗುತ್ತದೆ ಎಂದು ಕಸಾಪ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಅವರು ಹೇಳಿದರು.