ಅಮೆರಿಕಾದಲ್ಲಿ ವೇಶ್ಯವಾಟಿಕೆ ದಂಧೆ: ಟಾಲಿವುಡ್, ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿಯರ ಹೆಸರು

ಅಮೆರಿಕಾದಲ್ಲಿ ವೇಶ್ಯವಾಟಿಕೆ ದಂಧೆ: ಟಾಲಿವುಡ್, ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿಯರ ಹೆಸರು

YK   ¦    Jun 16, 2018 12:27:34 PM (IST)
ಅಮೆರಿಕಾದಲ್ಲಿ ವೇಶ್ಯವಾಟಿಕೆ ದಂಧೆ: ಟಾಲಿವುಡ್, ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿಯರ ಹೆಸರು

ಹೈದರಾಬಾದ್‌: ನಟಿ ಮಣಿಯರನ್ನು ಟಾರ್ಗೆಟ್ ಮಾಡಿ ಅವರನ್ನು ಕರೆಸಿಕೊಂಡು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಟಾಲಿವುಡ್ ನ ಪ್ರೊಡಕ್ಷನ್ ಮ್ಯಾನೇಜರ್ ದಂಪತಿಯನ್ನು ಅಮೇರಿಕದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟಿಯರ ಹೆಸರು ಅಮೆರಿಕದ ವೇಶ್ಯಾವಾಟಿಕೆ ಜಾಲದ ಪಟ್ಟಿಯಲ್ಲಿರುವುದು ತಿಳಿದು ಬಂದಿದೆ.

ದಂಧೆಯ ಮುಖ್ಯಸ್ಥ ಕಿಶನ್‌ ಮೊಡುಗುಂಡಿ ಹಾಗೂ ಚಂದ್ರಕಲಾರನ್ನು ಬಂಧಿಸಿರುವ ಅಮೆರಿಕದ ಫೆಡರಲ್‌ ಏಜೆಂಟ್‌, ವಿಚಾರಣೆ ನಡೆಸಿದ್ದು, ದಂಧೆಯಲ್ಲಿ ದಕ್ಷಿಣ ರಾಜ್ಯಗಳ ಇಬ್ಬರು ಪ್ರಸಿದ್ಧ ಚಿತ್ರ ನಟಿಯರು ಶಾಮೀಲಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು ಹಾಗೂ ಚೆನ್ನೈನಿಂದ ನಟಿಯರನ್ನು ಕರೆಸಿಕೊಂಡು ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಒಟ್ಟಾರೆ ಐವರು ಸಂತ್ರಸ್ತೆಯರ ಹೆಸರು ಹಾಗೂ ವಿವರಗಳು ಗೊತ್ತಾಗಿದ್ದು,ಇವರಲ್ಲಿ ಬೆಂಗಳೂರು ಹಾಗೂ ಚೆನ್ನೈನಿಂದ ತಲಾ ಒಬ್ಬರು ನಟಿಯ ಹೆಸರಿರುವುದಾಗಿ ತಿಳಿದು ಬಂದಿದೆ.