ಮಾನವೀಯತೆ ಮೆರೆದ ನಟ ದರ್ಶನ್

ಮಾನವೀಯತೆ ಮೆರೆದ ನಟ ದರ್ಶನ್

Jun 11, 2019 08:31:28 PM (IST)
ಮಾನವೀಯತೆ ಮೆರೆದ ನಟ ದರ್ಶನ್

ಮಂಡ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಗೆ ನಟ ದರ್ಶನ್ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಕಿರಣ್ ಕುಟುಂಬಕ್ಕೆ ದರ್ಶನ್ ಅವರು ಒಂದು ಲಕ್ಷ ರೂ.ಗಳ ಧನ ಸಹಾಯ ಮಾಡಿದರು.

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ರ್ಯಾಲಿಗೆ ಬಂದು ಹಿಂತಿರುಗುವ ವೇಳೆ ಕಿರಣ ಅಪಘಾತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಕಿರಣ್‍ಗೆ ಸಹಾಯದ ಅಗತ್ಯವಿತ್ತು. ಇದನ್ನು ಮನಗಂಡ ದರ್ಶನ್ ಒಂದು ಲಕ್ಷ ರೂ.ಗಳ ನೆರವು ನೀಡಿದ್ದಾರೆ.

ಅಂಬರೀಶ್ ಹಾಗೂ ದರ್ಶನ್ ಅಭಿಮಾನಿಯಾಗಿರುವ ಕಿರಣ್‍ಗೆ ನೆರವಿನಿಂದಾಗಿ ಸ್ವಲ್ಪ ಮಟ್ಟಿಗೆ ಸಹಾಯವಾದಂತಾಗಿದೆ.