'ಕೊಂಡಾಡನ' ಕೊಡವ ಮ್ಯೂಸಿಕ್ ವೀಡಿಯೋ ಆಲ್ಬಂ ಮಾ.24ರಂದು ಬಿಡುಗಡೆ

'ಕೊಂಡಾಡನ' ಕೊಡವ ಮ್ಯೂಸಿಕ್ ವೀಡಿಯೋ ಆಲ್ಬಂ ಮಾ.24ರಂದು ಬಿಡುಗಡೆ

CI   ¦    Mar 21, 2018 06:09:01 PM (IST)
'ಕೊಂಡಾಡನ' ಕೊಡವ ಮ್ಯೂಸಿಕ್ ವೀಡಿಯೋ ಆಲ್ಬಂ ಮಾ.24ರಂದು ಬಿಡುಗಡೆ

ಮಡಿಕೇರಿ: ಮಾಳೇಟಿರ ಎ. ಶ್ರೀನಿವಾಸ್ ಪ್ರಸ್ತುತ ಪಡಿಸುತ್ತಿರುವ ಮಾಳೇಟಿರ ಎಂ. ವೈಶಾಖ್ ಅಯ್ಯಪ್ಪ ಅವರ ನಿರ್ಮಾಣದ 'ಕೊಂಡಾಡನ' ಕೊಡವ ಮ್ಯೂಸಿಕ್ ವೀಡಿಯೋ ಆಲ್ಬಂ ಮಾರ್ಚ್ 24ರಂದು ಬಾಳುಗೋಡಿನ ಫೆಡರೇಷನ್ ಆಫ್ ಕೊಡವ ಸಮಾಜದಲ್ಲಿ ಬಿಡುಗಡೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಳೇಟಿರ ವೈಶಾಕ್ ಅಯ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿ, ಆಚಾರ, ವಿಚಾರ, ಹಬ್ಬಗಳಿಗೆ ಸಂಬಂಧಿಸಿದ ಎಂಟು ಕೊಡವ ಹಾಡುಗಳಿಗೆ ತಾನೇ ಸ್ವತಃ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿದ್ದೇನೆ. ತಾನು ಸೇರಿದಂತೆ ತನ್ನ ತಂದೆ ಮಾಳೇಟಿರ ಚರ್ಮಣ, ಸಹೋದರಿ ವರ್ಷಾ ಬೊಳ್ಳಮ್ಮ ಹಾಡುಗಳಿಗೆ ಧ್ವನಿ ನೀಡಿರುವುದಾಗಿ ಮಾಹಿತಿ ನೀಡಿ, ಗ್ರೀನ್ ಎಂಟರ್ಟೈನರ್ ನಡಿ ಇದೇ ಪ್ರಥಮ ಬಾರಿಗೆ ಕೊಡವ ಹಾಡುಗಳ ವಿಡಿಯೋ ಆಲ್ಬಂ ಹೊರ ತರಲಾಗುತ್ತಿದ್ದು, ಇದನ್ನು ಮಾ.24ರಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದರು.

ಮಾಳೇಟಿರ ಎ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಶಾಂತೆಯಂಡ ವೀಣಾ ಅಚ್ಚಯ್ಯ, ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ, ಜೆಡಿಎಸ್ ನ ಜಿಲ್ಲಾಧ್ಯಕ್ಷ ಹಾಗೂ ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷರಾದ ಮಂಡೇಪಂಡ ಸುಜ ಕುಶಾಲಪ್ಪ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ನಿವೃತ್ತ ಯೋಧ ಇಟ್ಟಿರ ಯೋಗೇಶ್ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಭಾಗವಹಿಸಲಿದ್ದಾರೆ ಎಂದರು.

ಸನ್ಮಾನ-ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಮಂಡೇಪಂಡ ಸುನಿಲ್ ಸುಬ್ರಮಣಿ ಹಾಗೂ ಶಾಂತೆಯಂಡ ವೀಣಾ ಅಚ್ಚಯ್ಯ, ಅಥ್ಲೀಟ್ ತೀತಮಡ ಅರ್ಜುನ್ ದೇವಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ನಿವೃತ್ತ ಯೋಧ ಇಟ್ಟಿರ ಯೋಗೇಶ್ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜ್ಜಿರ ಬಿ.ಅಯ್ಯಪ್ಪ ಸೇರಿದಂತೆ 6 ಜನ ಸಾಧಕರನ್ನು ಸನ್ಮಾನಿಸಲಾಗುವುದೆಂದರು.

ಕಾರ್ಯಕ್ರಮದಲ್ಲಿ ಉಮ್ಮತಾಟ್, ಬೊಳಕಾಟ್, ಕೋಲಾಟ್, ಪರೆಯಕಳಿ, ಪ್ರದರ್ಶನ, ಡಿಜೆ ನೈಟ್ಸ್, ವಾಲಗತಾಟ್ ಸೇರಿದಂತೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಹಲ ಬಗೆಯ ಒಳಾಂಗಣ ಕ್ರೀಡೆಯನ್ನು ಏರ್ಪಡಿಸಲಾಗಿದೆ ಎಂದರು.

ಕೊಡವ ಭಾಷಿಕರು ಹೇಗೆ ಬೇರೆ ಬೇರೆ ಭಾಷೆಯ ಹಾಡುಗಳನ್ನು ಕೇಳಿ ಆನಂದಿಸುವ ವಿಶೇಷ ಅನುಭವವನ್ನು ಹೊಂದಿದ್ದಾರೋ, ಅದೇ ರೀತಿ ಕೊಡವ ಭಾಷೆಯ ಹಾಡುಗಳು ವಿಶ್ವದಾದ್ಯಂತ ಸಂಗೀತಾಸಕ್ತರಿಗೆ ಮುಟ್ಟಬೇಕು ಎಂಬ ನಿಟ್ಟಿನಲ್ಲಿ ಹಾಗೂ ಈ ಮಣ್ಣಿನ ಆಚಾರ ವಿಚಾರ, ಕಲೆ, ಸಂಸ್ಕೃತಿ, ನೆಲ-ಜಲ, ಉಡುಗೆ ತೊಡುಗೆ ಎಲ್ಲವನ್ನು ವಿಶ್ವದಾದ್ಯಂತ ಸಂಗೀತದ ಮೂಲಕ ಜನರನ್ನು ತಲುಪಬೇಕೆನ್ನುವ ಆಶಯದಿಂದ ಆಲ್ಬಂ ಹೊರ ತರುತ್ತಿರುವುದಾಗಿ ವೈಶಾಕ್ ಅಯ್ಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಖಜಾಂಚಿ ಅಮ್ಮಾಟಂಡ ಮೇದಪ್ಪ ಹಾಗೂ ನಿರ್ದೇಶಕರಾದ ಮಡ್ಲಂಡ ಮೋನಿಶ್ ಸುಬ್ಬಯ್ಯ ಉಪಸ್ಥಿತರಿದ್ದರು.