ನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿ ಅಂತ್ಯ

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿ ಅಂತ್ಯ

HSA   ¦    Jan 17, 2020 07:49:46 PM (IST)
ನಟಿ ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ದಾಳಿ ಅಂತ್ಯ

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಬಳಿಕದ ಪರಿಶೀಲನೆಯು ಮುಕ್ತಾಯಗೊಂಡಿದೆ.

ಗುರುವಾರ ಬೆಳಗ್ಗೆ ಐಟಿ ಅಧಿಕಾರಿಗಳು ವಿರಾಜಪೇಟೆಯಲ್ಲಿ ಇರುವ ರಶ್ಮಿಕಾ ಮನೆ ಮೇಲೆ ದಾಳಿ ಮಾಡಿದ್ದರು. ಇದೇ ವೇಳೆ ಮಂದಣ್ಣ ತಂದೆಗೆ ಸೇರಿದ್ದ ಹಾಲ್ ನ ಕಚೇರಿ ಮೇಲೂ ಏಕಕಾಲದಲ್ಲಿ ದಾಳಿಯಾಗಿತ್ತು.

ರಶ್ಮಿಕಾ ಅವರು ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಇಂದು ಬೆಳಗ್ಗೆ ವಿರಾಜಪೇಟೆಯಿಂದ ತೆರಳಿದ್ದಾರೆ.

ರಶ್ಮಿಕಾ ಮನೆಯಿಂದ ಭಾರೀ ಪ್ರಮಾಣದ ನಗದು ಹಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇದರ ಬಗ್ಗೆ ಐಟಿ ಅಧಿಕಾರಿಗಳು ಅಥವಾ ರಶ್ಮಿಕಾ ಮನೆಯವರು ಯಾವುದೇ ಸ್ಪಷ್ಟನೆ ನೀಡಿಲ್ಲ.

ರಶ್ಮಿಕಾ 2016ರಲ್ಲಿ ಕನ್ನಡದ ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದಿದ್ದರು. ಈಗ ಅವರು ತಮಿಳು ಹಾಗೂ ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದು, ದಕ್ಷಿಣ ಭಾರತದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.