ಸುದೀಪ್ ನ ಮುಂದಿನ ಚಿತ್ರ ನಿರ್ದೇಶಿಸಲಿರುವ ಕೃಷ್ಣ

ಸುದೀಪ್ ನ ಮುಂದಿನ ಚಿತ್ರ ನಿರ್ದೇಶಿಸಲಿರುವ ಕೃಷ್ಣ

Jun 17, 2017 02:41:04 PM (IST)

ಬೆಂಗಳೂರು: ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿರುವ ಯೋಜನೆಯಲ್ಲಿದ್ದಾರೆ.

ಸುದೀಪ್ ಸದ್ಯಕ್ಕೆ ಬ್ಯಾಂಗ್ಕಾಕ್ ನಲ್ಲಿ 'ದ ವಿಲನ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಾಂತ್ಯಕ್ಕೆ ಬ್ಯಾಂಗ್ಕಾಕ್ ಗೆ ತೆರಳಿ ಅಲ್ಲಿ ನಟ ಸುದೀಪ್ ಅವರನ್ನು  ಕೃಷ್ಣ ಭೇಟಿ ಮಾಡಲಿದ್ದಾರೆ. ನಿರ್ದೇಶಕ ಸದ್ಯಕ್ಕೆ ಕಥೆಗಾರರೊಂದಿಗೆ ಹೈದರಾಬಾದ್ ನಲ್ಲಿದ್ದು, ಕಥೆಯ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಸುದೀಪ್ ಅವರಿಗೆ ಆಯ್ಕೆ ಮಾಡಿಕೊಳ್ಳಲು ಕೃಷ್ಣ ಅವರ ಬಳಿ ಹಲವು ಸ್ಕ್ರಿಪ್ಟ್ ಗಳು ಇವೆಯಂತೆ. "ಈ ಬಾರಿ ಮಾಮೂಲಿತನದಿಂದ ಹೊರಬಂದು ಇಲ್ಲಿಯವರೆಗೂ ನಾನು ಪ್ರಯತ್ನಿಸದ ಚಿತ್ರಕಥೆಯನ್ನು ಹೇಳಬೇಕೆಂದಿದ್ದೇನೆ" ಎನ್ನುವ ಕೃಷ್ಣ ಹಾಸ್ಯ ಮನರಂಜನಾ ಚಿತ್ರದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾರೆ.
ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ 'ಹೆಬ್ಬುಲಿ' ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಕಂಡು ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಆ ಯಶಸ್ಸನ್ನು ಮರುಕಳಿಸಲು ನಿರ್ದೇಶಕ ಸಿದ್ಧರಾಗುತ್ತಿದ್ದಾರೆ.