"ಹಾಸನ ಸೀಮೆಯವರು" ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಚಂದನ್ ಶೆಟ್ಟಿ

"ಹಾಸನ ಸೀಮೆಯವರು" ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಚಂದನ್ ಶೆಟ್ಟಿ

LK   ¦    Feb 08, 2018 05:08:38 PM (IST)
"ಹಾಸನ ಸೀಮೆಯವರು" ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಚಂದನ್ ಶೆಟ್ಟಿ

ದ್ಯಾವನೂರು ಮಂಜುನಾಥ್ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದು, ಇದೇ ಮೊದಲ ಬಾರಿಗೆ "ಹಾಸನ ಸೀಮೆಯವರು" ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ.

"ಹಾಸನ ಸೀಮೆಯವರು" ಎಂಬ ಚಿತ್ರದ ಟೈಟಲ್ ನ್ನು ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಬಿಡುಗಡೆ ಮಾಡಿದರು. ಭಾರೀ ನಿರೀಕ್ಷೆಯನ್ನಿಟ್ಟುಕೊಂಡು ಚಿತ್ರದ ತಯಾರಿಯನ್ನು ಯುವ ಸಾಹಿತಿ ಹಾಗೂ ಕನ್ನಡ ಯುಟ್ಯೂಬರ್ ದ್ಯಾವನೂರು ಮಂಜುನಾಥ್ ಮಾಡುತ್ತಿದ್ದಾರೆ. ಇದು ಚೊಚ್ಚಲ ಸಿನಿಮಾ ಆಗಿದ್ದು, ತನ್ನ ಸುತ್ತ ಮುತ್ತಲಿನ ಪರಿಸರ ಭಾಷಾ ಶೈಲಿ ಸ್ಥಳೀಯ ಆಚರಣೆ ಕಲೆಗಳನ್ನು ಸಿನಿಮಾದಲ್ಲಿ ತೋರಿಸಬೇಕು ಎನ್ನುವ ನಿಟ್ಟಿನಲ್ಲಿ ಸಿನಿಮಾವನ್ನು ತಯಾರು ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಹಾಸನದ ಆಶೋಕ ಹೋಟಲ್ ನಲ್ಲಿ ಟೈಟಲ್ ನ್ನು ಬಿಡುಗಡೆಯನ್ನು ಮಾಡಲಾಗಿದ್ದು,

ಶೀಘ್ರವೇ ಚಿತ್ರೀಕರಣ ನಡೆಯಲಿದ್ದು, ಕಲಾವಿದರ ಆಯ್ಕೆಯೂ ನಡೆಯುತ್ತಿದೆ ಎನ್ನಲಾಗುತ್ತಿದೆ. ದ್ಯಾವನೂರು ಮಂಜುನಾಥ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ.