ಕರ್ನಾಟಕದಲ್ಲಿ ಕೆಲವೆಡೆ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಅಡ್ಡಿ

ಕರ್ನಾಟಕದಲ್ಲಿ ಕೆಲವೆಡೆ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಅಡ್ಡಿ

YK   ¦    Jun 07, 2018 12:14:34 PM (IST)
ಕರ್ನಾಟಕದಲ್ಲಿ ಕೆಲವೆಡೆ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಅಡ್ಡಿ

ಬೆಂಗಳೂರು: ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ’ಕಾಲಾ’ ಚಿತ್ರ ಬಿಡುಗಡೆಗೆ ಹಲವೆಡೆ ಕನ್ನಡ ಪರ ಸಂಘಟನೆಗಳು ಅಡ್ಡಿ ಪಡಿಸಿದ ಹಿನ್ನೆಲೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಇನ್ನೂ ಕಾಲಾ ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಕೆಲವು ಚಿತ್ರಮಂದಿರಗಳು ಟಿಕೆಟ್ ಹಣ ವಾಪಸ್ ನೀಡಿವೆ. ದಾವಣಗೆರೆ, ಮೈಸೂರು, ಹಾಸನ, ರಾಯಚೂರಿನ ಮಾಲ್ ಮತ್ತು ಥಿಯೇಟರ್‌ಗಳಲ್ಲಿ ಕಾಲಾ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿನ ಓರಾಯನ್ ಮಾಲ್, ಲಿಡೋ ಚಿತ್ರಮಂದಿರ, ಗರುಡಾ ಮಾಲ್‍ನಲ್ಲಿ ಚಿತ್ರಪ್ರದರ್ಶನವನ್ನು ರದ್ದು ಮಾಡಲಾಗಿದೆ.