ಸಾಮಾನ್ಯ ಮಹಿಳೆಯ ಅಸಾಮಾನ್ಯ ಕಥೆಯ 'ದೇಯಿ ಬೈದೆತಿ' ಚಿತ್ರ 15ರಂದು ಬಿಡುಗಡೆ

ಸಾಮಾನ್ಯ ಮಹಿಳೆಯ ಅಸಾಮಾನ್ಯ ಕಥೆಯ 'ದೇಯಿ ಬೈದೆತಿ' ಚಿತ್ರ 15ರಂದು ಬಿಡುಗಡೆ

DA   ¦    Feb 07, 2019 04:28:26 PM (IST)
ಸಾಮಾನ್ಯ ಮಹಿಳೆಯ ಅಸಾಮಾನ್ಯ ಕಥೆಯ 'ದೇಯಿ ಬೈದೆತಿ' ಚಿತ್ರ 15ರಂದು ಬಿಡುಗಡೆ

ಬೆಳ್ತಂಗಡಿ: ಸಾಮಾನ್ಯ ಮಹಿಳೆಯ ಅಸಾಮಾನ್ಯ ಕಥೆಯುಳ್ಳ 'ದೇಯಿ ಬೈದೆತಿ' ಎಂಬ ತುಳು ಚಲನಚಿತ್ರ ಫೆ. 15 ರಂದು ರಾಜ್ಯದಾದ್ಯಂತ ಮಾತ್ರವಲ್ಲದೆ ಕೊಲ್ಲಿ ರಾಷ್ಟ್ರಗಳಲ್ಲೂ ಪ್ರದರ್ಶನಗೊಳ್ಳಲಿದೆ ಎಂದುಚಿತ್ರದ ನಿರ್ದೇಶಕ, ನಿರ್ಮಾಪಕ, ಸೂರ್ಯೋದಯ ಪೆರಂಪಳ್ಳಿ ತಿಳಿಸಿದರು.

ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ತುಳುನಾಡಿನಲ್ಲಿ ಪಾಡ್ದನಗಳಿಗೆ ವಿಶೇಷ ಮಹತ್ವವಿದೆ. ಅದರಲ್ಲಿರುವ ಅಗೋಚರ ನಡೆಯನ್ನು ಚಿತ್ರದಲ್ಲಿ ತೆರೆದಿಡಲಾಗಿದೆ. ಇದರಲ್ಲಿ ಬರುವ ಕಥೆಯು ಕೋಟಿ-ಚೆನ್ನಯ್ಯರು ಇದ್ದಕಾಲಕ್ಕಿಂತಲೂ ಹಿಂದಿನಂದು ಅಂದರೆ ಸುಮಾರು 500 ವರ್ಷಗಳ ಪೂರ್ವದಲ್ಲಿನ ನಡೆದ ಕಥೆಯುಇ ದ್ದಾಗಿದ್ದು ಅಂದಿನ ಸಾಮಾಜಿಕ ಸ್ಥಿತಿಗತಿಗಳ ಚಿತ್ರಣ ನೀಡುತ್ತದೆ. ಪಾಡ್ದನದಲ್ಲಿದೇಯಿ ಬೈದೆತಿಯ ಬದುಕಿನ ನುಡಿಯನ್ನು ಮಾತ್ರ ನಾವು ಕೇಳಿದ್ದೇವೆ. ಆದರೆಚಿತ್ರದಲ್ಲಿ ಆ ನುಡಿಯಲ್ಲಿಅಡಗಿರುವ ಸತ್ಯದನಡೆಯನ್ನು, ಶೋಷಿತ ವರ್ಗದದನಿಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಆ ಕಾಲದ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು , ಕಂಡು ಕೇಳರಿಯದ ಚಿತ್ರವಿಚಿತ್ರ ಸಂಪ್ರದಾಯಾಗಳನ್ನು, ಕಟ್ಟುಪಾಡುಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಚಿತ್ರಕ್ಕಾಗಿ ಐನೂರು ವರ್ಷಗಳ ಹಿಂದಿನ ಕಾಲಕ್ಕೆ ಸರಿಹೊಂದುವಂತಹ ಭವ್ಯ ಮನೆಗಳ ಸೆಟ್ಗಗಳನ್ನು ಪರ್ಕಳದ ಶೆಟ್ಟಿಬೆಟ್ಟು, ಶೀರೂರು ಮೂಲ ಮಠದಲ್ಲಿ ರಚಿಸಿ ಚಿತ್ರೀಕರಣ ನಡೆಸಲಾಗಿದೆ. ಉಳಿದೆಲ್ಲಾ ದೃಶ್ಯಗಳನ್ನು ಕರಾವಳಿಯಲ್ಲೇ ಚಿತ್ರಕರಿಸಲಾಗಿದ್ದು ಸುಮಾರು ಒಂದೂವರೆ ಕೋಟಿ ಖರ್ಚು ತಗುಲಿದೆ.

ದುಬೈ, ಬೆಹರಿನ್, ಕತಾರ್ ಮೊದಲಾದೆಡೆ ಚಿತ್ರವು ಏಕಕಾಲದಲ್ಲಿ ತೆರೆಕಾಣಲಿದೆ ಎಂದರಲ್ಲದೆ ಕೆಲ ದಿನಗಳ ಬಳಿಕ ಕನ್ನಡದಲ್ಲೂ ಇದು ಬರಲಿದೆ ಎಂದರು.

ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್ನಡಲ್ಲಿ ನಿರ್ಮಿಸಲಾಗಿರುವ ಚಿತ್ರಕ್ಕೆ ದೇವರಾಜ್ ಪಾಲನ್, ರಾಜ್ಕೃ್ಷ್ಣ, ಅಮಿತ್ರಾಗವ್ ಸಹ ನಿರ್ದೇಶನ ನೀಡಿದ್ದಾರೆ. ಬಿ. ಭಾಸ್ಕರರಾವ್ ಸಂಗೀತ, ಮಣಿಕಾಂತ್ಕನದ್ರಿ ಅವರ ಹಿನ್ನಲೆ ಸಂಗೀತವಿದೆ. ಕರಾವಳಿಯ ಸಂಸ್ಕøತಿಯನ್ನು ಬಲ್ಲವರಾದ ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಕಲಾ ನಿರ್ದೇಶಕರಾಗಿದ್ದಾರೆ. ಉಮೇಶ್ ಪೂಜಾರಿ ಬೆಳ್ತಂಗಡಿ ಸಹ ನಿರ್ಮಾಪಕರಾಗಿದ್ದಾರೆ. ಸೆನ್ಸಾರ್ ಮಂಡಳಿ ಇದಕ್ಕೆ ಯು ಪ್ರಮಾಣ ಪತ್ರ ನೀಡಿದೆ ಎಂದರು.

ಗೋಷ್ಠಿಯಲ್ಲಿ ಸಹನಿರ್ಮಾಪಕ ಉಮೇಶ್ಕು್ಮಾರ್, ಯುವವಾಹಿನಿ ಅಧ್ಯಕ್ಷ ಪ್ರಶಾಂತ ಮಚ್ಚಿನ, ಸಂಘಟನಾ ಕಾರ್ಯದರ್ಶಿ ಸುನಿಲ್‍ ಕುಮರ್ ಕನ್ಯಾಡಿ, ನಿಯೋಜಿತ ಅಧ್ಯಕ್ಷ ಹರೀಶ್ ಸುವರ್ಣ, ಸಲಹೆಗಾರರಾದ ಗೋಪಾಲಕೃಷ್ಣ ಸಾಲಿಯಾನ್ ಹಾಗು ರಮಾನಂದ ಸಾಲಿಯಾನ್‍ ಇದ್ದರು.