ಅನುಷ್ಕಾ ಶೆಟ್ಟಿಗೆ ಮೊದಲು ಲವ್ ಆಗಿದ್ದು ಯಾರ ಮೇಲೆ ಗೊತ್ತಾ?

ಅನುಷ್ಕಾ ಶೆಟ್ಟಿಗೆ ಮೊದಲು ಲವ್ ಆಗಿದ್ದು ಯಾರ ಮೇಲೆ ಗೊತ್ತಾ?

Nov 09, 2017 05:48:20 PM (IST)
ಅನುಷ್ಕಾ ಶೆಟ್ಟಿಗೆ ಮೊದಲು ಲವ್ ಆಗಿದ್ದು ಯಾರ ಮೇಲೆ ಗೊತ್ತಾ?

ಹೈದರಾಬಾದ್: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕರಾವಳಿ ಕರ್ನಾಟಕದ ನಟಿ ಅನುಷ್ಕಾ ಶೆಟ್ಟಿ, ತನ್ನ ಮೊದಲ ಪ್ರೇಮದ ಬಗ್ಗೆ ಸಂದರ್ಶನವೊಂದರಲ್ಲಿ ರಹಸ್ಯ ಹೊರಹಾಕಿದ್ದಾರೆ.

ಇತ್ತೀಚೆಗಷ್ಟೇ ತನ್ನ 36ನೇ ಹುಟ್ಟುಹಬ್ಬ ಆಚರಿಸಿದ ಅನುಷ್ಕಾ ಶೆಟ್ಟಿಗೆ ಟೀಂ ಇಂಡಿಯಾದ ಮಾಜಿ ನಾಯಕ, ರಾಹುಲ್ ದ್ರಾವಿಡ್ ಅವರ ಮೇಲೆ ಮೊದಲ ಸಲ ಲವ್ ಆಗಿತ್ತಂತೆ.

ರಾಹುಲ್ ದ್ರಾವಿಡ್ ರ ಸರಳ ಸ್ವಭಾವ, ತಾಳ್ಮೆ, ಏಕಾಗ್ರತೆ, ನಡವಳಿಕೆ ಹಾಗೂ ನಾಯಕತ್ವ ಗುಣಗಳನ್ನು ಹುಚ್ಚು ಹಿಡಿಸುವಷ್ಟು ಇಷ್ಟಪಟ್ಟಿದ್ದೆ ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ದೇವಸೇನಾ ಪಾತ್ರದಲ್ಲಿ ಮಿಂಚಿದ್ದರು. ಅನುಷ್ಕಾ ಮತ್ತು ಪ್ರಭಾಸ್ ಮಧ್ಯೆ ಲವ್ ಇದೆಯೆಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ ತಮ್ಮ ಮಧ್ಯೆ ಯಾವುದೇ ಲವ್ ಇಲ್ಲವೆಂದು ಪ್ರಭಾಸ್ ಸ್ಪಷ್ಟಪಡಿಸಿದ್ದರು.