ಪತ್ನಿ ಸಾವಿನ ಪ್ರಕರಣದಲ್ಲಿ ‘ಬಾಹುಬಲಿ’ ಚಿತ್ರ ಕಲಾವಿದ ಅರೆಸ್ಟ್

ಪತ್ನಿ ಸಾವಿನ ಪ್ರಕರಣದಲ್ಲಿ ‘ಬಾಹುಬಲಿ’ ಚಿತ್ರ ಕಲಾವಿದ ಅರೆಸ್ಟ್

YK   ¦    Aug 08, 2019 11:48:01 AM (IST)
ಪತ್ನಿ ಸಾವಿನ ಪ್ರಕರಣದಲ್ಲಿ ‘ಬಾಹುಬಲಿ’ ಚಿತ್ರ ಕಲಾವಿದ ಅರೆಸ್ಟ್

ದಾಖಲಿಸಿದ್ದು, ಆತನನ್ನು ಬಂಧಿಸಿದ್ದಾರೆ.


ನಟ ಮಧು ಪ್ರಕಾಶ್ ಪತ್ನಿ ಭಾರತಿ ಮಂಗಳವಾರ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಮೃತ ಭಾರತಿ ತಂದೆ ಅಳಿಯ ಪ್ರಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಮಗಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಿದ್ದಾರೆ.

ಮಧು ಅವರು ಎಸ್ ಎಸ್ ರಾಜ್ ಮೌಲಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಬಾಹುಬಲಿ ಚಿತ್ರದಲ್ಲಿ ಚಿಕ್ಕ ಪಾತ್ರ ಒಂದಕ್ಕೆ ಬಣ್ಣ ಹಚ್ಚಿದ್ದರು. ಮಧು ಅವರು ಭಾರತಿಯನ್ನು 2015ರಲ್ಲಿ ವಿವಾಹವಾಗಿದ್ದರು. ಈ ಪ್ರಕರಣದ ಸಂಬಂಧ ಮಧು ಅವರನ್ನು ಬಂಧಿಸಿದ್ದು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಿದ್ದಾರೆ.