ಸಲ್ಮಾನ್ ನಟನೆ ಭಾರತ್ ಸಿನಿಮಾದ ಟ್ರೈಲರ್ ಬಿಡುಗಡೆ

ಸಲ್ಮಾನ್ ನಟನೆ ಭಾರತ್ ಸಿನಿಮಾದ ಟ್ರೈಲರ್ ಬಿಡುಗಡೆ

HSA   ¦    Apr 22, 2019 04:02:07 PM (IST)
ಸಲ್ಮಾನ್ ನಟನೆ ಭಾರತ್ ಸಿನಿಮಾದ ಟ್ರೈಲರ್ ಬಿಡುಗಡೆ

ನವದೆಹಲಿ: ಜೂನ್ 5ರಂದು ಬಿಡುಗಡೆಯಾಗಲಿರುವ ಸಲ್ಮಾನ್ ಖಾನ್ ನಟನೆ ಭಾರತ್ ಸಿನಿಮಾದ ಟ್ರೈಲರ್ ಈಗ ಭಾರೀ ಸದ್ದು ಮಾಡುತ್ತಿದೆ.

ಸಲ್ಮಾನ್ ಖಾನ್ ಇದರಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಒಂದು ದೇಶಪ್ರೇಮದ ಕಥೆಯುಳ್ಳ ಸಿನಿಮಾವಾಗಿದೆ.
ಸಿನಿಮಾದಲ್ಲಿ ಸಲ್ಮಾನ್, ಕತ್ರೀನಾ ಕೈಫ್, ದಿಶಾ ಪಟಾನಿ, ಜಾಕಿ ಶ್ರಾಫ್, ತಬು, ಸುನಿಲ್ ಗ್ರೊವರ್ ಮೊದಲಾದವರು ನಟಿಸುತ್ತಿದ್ದಾರೆ.

ಇದರಲ್ಲಿ ಜಾಕಿ ಶ್ರಾಫ್ ಅವರ ಸಲ್ಮಾನ್ ತಂದೆಯ ಪಾತ್ರ ನಿರ್ವಹಿಸುತ್ತಿದ್ದಾರೆ ಮತ್ತು ಈ ಚಿತ್ರವು ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥೆಯನ್ನು ಹೊಂದಿದೆ.

ಅಲಿ ಅಬ್ಬಾಸ್ ಜಾಫರ್ ಅವರು ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಬಳಿಕ ಮತ್ತೊಂದು ಸಿನಿಮಾ ನಿರ್ದೇಶಿಸಿದ್ದಾರೆ.