ಹುಟ್ಟು ಹಬ್ಬದ ಸಂಭ್ರಮದಲ್ಲಿ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ

YK   ¦    Sep 14, 2018 03:42:03 PM (IST)
ಹುಟ್ಟು ಹಬ್ಬದ ಸಂಭ್ರಮದಲ್ಲಿ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ

ಚೆಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಜಗದೀಶ್ ಇಂದು 25 ವರ್ಷದ ಹುಟ್ಟುಹಬ್ಬವನ್ನು ತವರು ಮನೆಯಲ್ಲಿ ಆಚರಿಸಿಕೊಂಡರು. ಇಂದು ಬೆಳಗ್ಗೆ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಪತಿ ಮನೆಯವರ ಸಮ್ಮುಖದಲ್ಲಿ ಅಭಿಮಾನಿಗಳ ಜತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ಎಲ್ಲ ಫೋಟೋಗಳನ್ನು ಅಮೂಲ್ಯ ಪೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ ತವರು ಮನೆಯಲ್ಲಿ ಅಮ್ಮ, ಅಣ್ಣ ಮತ್ತು ಕುಟುಂಬದ ಆಪ್ತರ ಜತೆ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ.

ಬಳಿಕ ಅವರ ಪತಿ ಜಗದೀಶ್, ಅತ್ತೆ ಮತ್ತು ಮಾವ ಜತೆ ಕೇಕ್ ಕತ್ತರಿಸಿಕೊಂಡು ಬರ್ತ್ ಡೇ ಆಚರಸಿಕೊಂಡಿದ್ದಾರೆ.

More Images