ಪ್ರೀತಿ ಹೆಸರಲ್ಲಿ ಕನ್ನಡ ನಟಿಯಿಂದ ಮೋಸ: ಆರೋಪ

ಪ್ರೀತಿ ಹೆಸರಲ್ಲಿ ಕನ್ನಡ ನಟಿಯಿಂದ ಮೋಸ: ಆರೋಪ

YK   ¦    May 21, 2018 03:49:46 PM (IST)
ಪ್ರೀತಿ ಹೆಸರಲ್ಲಿ ಕನ್ನಡ ನಟಿಯಿಂದ ಮೋಸ: ಆರೋಪ

ಬೆಂಗಳೂರು: ಪ್ರೀತಿ ಹೆಸರಲ್ಲಿ ಸ್ಯಾಂಡಲ್ ವುಡ್ ನ ನಟಿಯೊಬ್ಬರು ಮಾಡೆಲ್ ಗೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಇದೀಗ ಆ ನಟಿ ಗಂಭೀರ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಆರೋಪ ಕನ್ನಡದ ನಟಿ ಪ್ರಿಯಾಂಕ ಚಿಂಚೋಳಿ ಮೇಲೆ ಕೇಳಿಬಂದಿದೆ. ಈಕೆ ಹರ ಹರ ಮಹಾದೇವ ಧಾರವಾಹಿಯಲ್ಲಿ ಪಾರ್ವತಿ ಪಾತ್ರದಲ್ಲಿ ತನ್ನ ನಟನೆಯ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಸಾಯಿರಾಂ ಎಂಬ ಮಾಡೆಲ್ ಗೆ ನಟಿ ವಂಚಿಸಿದ್ದಾರೆ ಎನ್ನಲಾಗಿದೆ. ಪ್ರೀತಿ ಹೆಸರು ಹೇಳಿಕೊಂಡು ನಟಿ ಪ್ರಿಯಾಂಕ ಮೋಸ ಮಾಡಿ, ಹಣ ವಂಚಿಸಿದ್ದಾರೆ ಎಂದು ಆರೋಪಿಸಿದ್ದು, ಅಲ್ಲದೆ ಆಕೆಯ ಜತೆಗಿನ ಒಂದಿಷ್ಟು ಫೋಟೋ ಮತ್ತು ಮೆಸೇಂಜರ್ ಸಂಭಾಷಣೆ ನನ್ನ ಬಳಿ ಇದೆ ಎಂದು ಸಾಯಿರಾಂ ಹೇಳಿಕೊಂಡಿದ್ದಾರಂತೆ.

ಇನ್ನು ಸಾಯಿರಾಂ ಹೊರಿಸಿರುವ ಆರೋಪವನ್ನು ತಳ್ಳಿ ಹಾಕಿದ ಪ್ರಿಯಾಂಕ ಸಾಯಿರಾಮ್ ಕೇವಲ ನನಗೆ ಸ್ನೇಹಿತ, ಆತ ನನ್ನ ಮೇಲೆ ದುರುದ್ದೇಶ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ. ಆತನ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಲ್ಲದೆ ಈ ಕುರಿತಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ‘ ಓರ್ವ ವ್ಯಕ್ತಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ನನ್ನನ್ನು ಪ್ರೀತಿಸುವವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಅವರು ನಂಬುವುದಿಲ್ಲ. ನಿಮ್ಮ 'ಪಾರ್ವತಿ'ಯನ್ನು ಹೀಗೆ ಬೆಂಬಲಿಸುತ್ತಿರಿ ಎಂದು ನಟಿ ಮನವಿಯನ್ನು ಮಾಡಿಕೊಂಡಿದ್ದಾರೆ.