ಮಾಡೆಲಿಂಗ್ ಲೋಕದಲ್ಲಿ ಮೈಸೂರು ಆಟೋ ಚಾಲಕನ ಪುತ್ರನ ಸಾಧನೆ

ಮಾಡೆಲಿಂಗ್ ಲೋಕದಲ್ಲಿ ಮೈಸೂರು ಆಟೋ ಚಾಲಕನ ಪುತ್ರನ ಸಾಧನೆ

YK   ¦    Aug 30, 2019 03:36:07 PM (IST)
ಮಾಡೆಲಿಂಗ್ ಲೋಕದಲ್ಲಿ ಮೈಸೂರು ಆಟೋ ಚಾಲಕನ ಪುತ್ರನ ಸಾಧನೆ

ಮೈಸೂರು: ರಿಕ್ಷಾ ಚಾಲಕರೊಬ್ಬರ ಮಗ ಮಾಡೆಲಿಂಗ್ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಯುವಕರಲ್ಲಿ ಹೊಸ ಛಾಪನ್ನು ಮೂಡಿಸಿದ್ದಾರೆ.

ಈ ಸಾಧನೆಯನ್ನು ಮಾಡಿದವರು ನಗರದ ಆಟೋ ಚಾಲಕ ಮಿರ್ಜ್ ಮಹರ್ ಆಲಿ ಮತ್ತು ಜಾಫ್ರಿಯಾ ಬೇಗಂ ದಂಪತಿಯ ಪುತ್ರ ಮಿಜ್ ಜವಾರ್ ಆಲಿ. ಈತ ಕಳೆದ ನಾಲ್ಕು ವರ್ಷದಿಂದ ಮಾಡೆಲಿಂಗ್ ಹಾಗೂ ಫ್ಯಾಷನ್ ಲೋಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಈಚೆಗೆ ಯೂರೋಪಿನ ಬಲ್ಗೇರಿಯಾದಲ್ಲಿ ನಡೆದ ಸೂಪರ್ ಮಾಡೆಲ್ ಆಫ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಮೂಲತಃ ಹಾಸನದವರಾದ ಇವರು ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕಾಲೇಜು ದಿನಗಳಿಂದಲೇ ಪ್ಯಾಷನ್ ಲೋಕದ ಬಗ್ಗೆ ಒಲವಿದ್ದ ಮಿರ್ಜ್ ಜವಾರ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.

‘ಅಂತರರಾಷ್ಟ್ರೀಯ ಫ್ಯಾಷನ್ ಲೋಕದಲ್ಲಿ ರೂಪದರ್ಶಿ ಆಗಿ ಸಾಧನೆ ಮಾಡಬೇಕೆಂಬ ಆಸೆ ಇದೆ. ಅದಲ್ಲದೆ ಪ್ಯಾಷನ್ ಬಗ್ಗೆ ಆಸಕ್ತಿಯಿರುವ ಬಡ ಮಕ್ಕಳಿಗೆ ಕೋಚಿಂಗ್ ಸೆಂಟರ್ ತೆರೆಯಬೇಕೆಂಬ ಗುರಿಯೂ ಇದೆ. ಅಬ್ದುಲ್ ಕಲಾಂ ಅವರ ಮಾತಿನ  ಸ್ಪೂರ್ತಿಯಿಂದ ಪ್ರತಿ ಹೆಜ್ಜೆಯನ್ನು ಇಡುತ್ತಿದ್ದೇನೆ’ ಎನ್ನುತ್ತಾರೆ ಮಿರ್ಜ್ ಜವಾರ್ ಅಲಿ..

ಬಿಬಿಎಂ ನಲ್ಲಿ ಪದವಿ ಪಡೆದಿದ್ದ ಈತ ಫ್ಯಾಷನ್ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ಕನಸ್ಸಿದೆ. ಇವರಿಗೆ

2018ರಲ್ಲಿ ಮಿಸ್ಟರ್ ಕರ್ನಾಟಕ ಟಿಸಿಯು, ಸ್ಮಾರ್ಟ್ ಹಾಗೂ ಟಾಪ್ ಮಾಡೆಲ್ ಆಫ್ ಮೈಸೂರು, ಮಿಸ್ಟರ್ ಹೆರಿಟೇಜ್ ಕರ್ನಾಟಕ, ಮಿಸ್ಟರ್ ಗ್ಲ್ಯಾಮ್ ಮೆನಿಯಾ ರನ್ ವೇ, 2019ರ ಜನವರಿಯಲ್ಲಿ ಬೆಸ್ಟ್ ಮಾಡೆಲ್ ಆಫ್ ಗ್ರ್ಯಾಂಡ್ ಯೂನಿವರ್ಸ್ ಇನ್ ಇಂಡಿಯಾ ಪ್ರಶಸ್ತಿ ಲಭಿಸಿದೆ.

More Images