63ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ರೇಖಾ

63ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ರೇಖಾ

Oct 10, 2017 10:24:59 AM (IST)
63ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ರೇಖಾ

ಬಾಲಿವುಡ್ ನಟಿ ರೇಖಾಗೆ ಇಂದು 63ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರೇಖಾ ಹುಟ್ಟಿದ್ದು 1954ರ ಅಕ್ಟೋಬರ್ 10ರಂದು. ಅಪ್ರತಿಮ ಚೆಲುವೆ ಹಾಗೂ ತಮ್ಮ ನಟನಾ ಕೌಶಲದಿಂದ ಬಾಲಿವುಡ್ ಚಿತ್ರರಂಗದಲ್ಲಿ ಅಗ್ರ ನಾಯಕಿಯಾಗಿ ಹಲವು ವರ್ಷಗಳ ಕಾಲ ಮೆರೆದ ಹೆಗ್ಗಳಿಕೆ ಇವರಿಗಿದೆ.

ಹೀಗಾಗಿ ಹಿಂದಿ ಚಿತ್ರರಂಗ ಕಂಡ ಪ್ರತಿಭಾನ್ವಿತ ನಾಯಕಿ ನಟಿ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು. 1966ರಲ್ಲಿ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ ಅವರು, ಮೊದಲು ಚಿತ್ರರಂಗಕ್ಕೆ ಪ್ರವೆಶಿಸಿದ್ದ ತೆಲುಗು ರಂಗೂಲಾ ರತ್ನಂ ಚಿತ್ರದ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಇವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ 2010ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.